ಗಿಡ ನೆಟ್ಟು ಸಮಂತಾ ಚಾಲೆಂಜ್ ಪೂರೈಸಿದ ರಶ್ಮಿಕಾ

Promotion

ಬೆಂಗಳೂರು, ಜುಲೈ 17, 2020 (www.justkannnada.in):  ನಟಿ ಸಮಂತಾ ರಶ್ಮಿಕಾ ಸೇರಿದಂತೆ ತಮ್ಮ ಆತ್ಮೀಯ ವಲಯದವರಿಗೆ ಗಿಡ ನೆಡುವ ಚಾಲೆಂಜ್ ವರ್ಗಾಯಿಸಿದ್ದಾರೆ.

ಸಮಂತಾ ಮೊನ್ನೆಯಷ್ಟೇ ತಮ್ಮ ಮಾವ ನಾಗಾರ್ಜುನ ಜತೆ ಗಾರ್ಡನ್ ನಲ್ಲಿ ಗಿಡ ನೆಟ್ಟಿದ್ದರು. ಈ ಚಾಲೆಂಜನನ್ನು ಇನ್ನಷ್ಟು ಜನರಿಗೆ ನೀಡಿದ್ದರು.

ಇದೀಗ ಈ ಸವಾಲು ಪೂರೈಸಿರುವ ರಶ್ಮಿಕಾ ಮತ್ತಷ್ಟು ಮಂದಿಗೆ ಈ ಚಾಲೆಂಜ್ ನೀಡಿದ್ದಾರೆ. ನಟಿ ಆಶಿಕಾ ರಂಗನಾಥ್ ಸೇರಿದಂತೆ ಗೆಳೆಯರು, ಅಭಿಮಾನಿಗಳಿಗೆ ಮೂರು ಗಿಡ ನೆಡುವ ಚಾಲೆಂಜ್ ಮಾಡಿದ್ದಾರೆ. ಇದು ಪರಿಸರ ಸಂರಕ್ಷಣೆಗಾಗಿ ನಡೆಯುತ್ತಿರುವ ಆನ್ ಲೈನ್ ಚಾಲೆಂಜ್ ಅಭಿಯಾನವಾಗಿದೆ.