ನೀರಾವರಿ ಮಂತ್ರಿಯಾದಾಗಿಂದಲೂ ಷಡ್ಯಂತ್ರ: ಸಿಡಿ ಬಗ್ಗೆ ದೂರು ನೀಡೋದು ಖಚಿತ- ಬಾಲಚಂದ್ರ ಜಾರಕಿಹೊಳಿ…

Promotion

ಬೆಳಗಾವಿ,ಮಾರ್ಚ್,12,2021(www.justkannada.in): ರಮೇಶ್ ಜಾರಕಿಹೊಳಿ ನೀರಾವರಿ ಸಚಿವರಾಗಿದ್ದಾಗಿಂದಲೂ ಹನಿಟ್ರ್ಯಾಪ್ ಷಡ್ಯಂತ್ರ ನಡೆದಿದೆ. ಸಿಡಿ  ಬಗ್ಗೆ ದೂರು ನೀಡೋದು ಖಚಿತ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.jk

ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಿಡುಗಡೆ ಪ್ರಕರಣ ಸಂಬಂಧ ಈಗಾಗಲೇ ತನಿಖೆ ಆರಂಭಿಸಿರುವ ಎಸ್ ಐಟಿ ನಾಲ್ವರನ್ನ  ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ, ಸೋಮವಾರ ಬಳಿಕ ಸಿಡಿ ಬಗ್ಗೆ ದೂರು ನೀಡುವ ಕುರಿತು ನಿರ್ಧಾರ ಮಾಡುತ್ತೇವೆ. ಹೆಸರು ಉಲ್ಲೇಖಿಸಿಯೇ ದೂರು ನೀಡುತ್ತೇವೆ ಎಂದರು.rasaleele-cd-case-complain-mla-balachandra-jarakiholi

ಇನ್ನು ರಮೇಶ್ ಜಾರಕಿಹೊಳಿ ನೀರಾವರಿ ಸಚಿವರಾಗಿದ್ದಾಗಿಂದಲೂ ಹನಿಟ್ರ್ಯಾಪ್ ಷಡ್ಯಂತ್ರ ನಡೆದಿದೆ. 2+4+3 ಗ್ಯಾಂಗ್ ಬಂಧಿಸಿದರೇ ಸತ್ಯಾಂಶ ಹೊರ ಬರಲಿದೆ. ಕೇಸ್ ನಲ್ಲಿ ಪ್ರಭಾವಿಗಳಿರುವ ಶಂಕೆ ವ್ಯಕ್ತವಾಗಿದೆ ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

Key words: rasaleele-CD -case-complain –MLA-Balachandra Jarakiholi