ಶಿರಡಿ ಬಾಬಾ ಮಂದಿರದಲ್ಲಿ ಭಾವಪರವಶರಾದ ರಾಣಿ ಮುಖರ್ಜಿ

Promotion

ಬೆಂಗಳೂರು, ಡಿಸೆಂಬರ್ 19, 2019 (ww.justkannada.in): ನಟಿ ರಾಣಿ ಮುಖರ್ಜಿ ಶಿರಡಿಗೆ ಭೇಟಿ ನೀಡಿ ಸಾಯಿ ಬಾಬಾನ ದರ್ಶನ ಪಡೆದಿದ್ದಾರೆ.

‘ಮರ್ದಾನಿ-2’ ಚಿತ್ರ ಬಿಡುಗಡೆಯಾದ ಬೆನ್ನಲ್ಲೇ ರಾಣಿ ಮುಖರ್ಜಿ ಸಾಯಿ ಬಾಬಾ ದರ್ಶನ ಪಡೆದಿದ್ದಾರೆ. ಅಂದಹಾಗೆ ಭಕ್ತೆ ಆಗಿರುವ ರಾಣಿ ಮುಖರ್ಜಿ ಆಗಾಗ ಶಿರಡಿ ಸಾಯಿ ಮಂದಿರಕ್ಕೆ ಭೇಟಿ ನೀಡುತ್ತಲೇ ಇರುತ್ತಾರೆ.

‘ಮರ್ದಾನಿ-2’ ಚಿತ್ರ ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿರುವ ರಾಣಿ ಮುಖರ್ಜಿ, ಸಾಯಿ ಬಾಬಾನ ಮೂರ್ತಿ ಮುಂದೆ ಭಾವುಕರಾದರು. ಭಕ್ತ ಪರವಶರಾಗಿದ್ದ ರಾಣಿ ಮುಖರ್ಜಿ ಕಣ್ಣಾಲಿಗಳು ಒದ್ದೆ ಆದವು.