ಏಳು ಜನ್ಮ ಎತ್ತಿ ಬಂದ್ರೂ ರಾಮನಗರ ಜಿಲ್ಲೆ ಛಿದ್ರ ಮಾಡಲು ಆಗಲ್ಲ-ಡಿಕೆ ಶಿವಕುಮಾರ್ ವಿರುದ್ಧ ಹೆಚ್.ಡಿಕೆ ಆಕ್ರೋಶ..

Promotion

ಬೆಂಗಳೂರು,ಅಕ್ಟೋಬರ್ ,25,2023(www.justkannada.in):  ಕನಕಪುರ ತಾಲೂಕನ್ನು ಬೆಂಗಳೂರಿಗೆ  ಸೇರ್ಪಡೆ ಮಾಡುವುದಾಗಿ ಹೇಳಿದ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಮಾಜಿ ಸಿಎಂ  ಹೆಚ್​ಡಿ ಕುಮಾರಸ್ವಾಮಿ  ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಡಿ.ಕೆ ಶಿವಕುಮಾರ್,  ಏಳು ಜನ್ಮ ಎತ್ತಿ ಬಂದರೂ ರಾಮನಗರ ಜಿಲ್ಲೆಯನ್ನು ಛಿದ್ರ ಮಾಡಲು ಆಗಲ್ಲ. ಚೂರು ಚೂರು ಮಾಡುವುದಕ್ಕೆ ರಾಮನಗರವೇನು ಕಲ್ಲುಬಂಡೆಯೇ? ಎಂದು ತಿರುಗೇಟು ನೀಡಿದರು.

ಬಡವರ ಹೊಟ್ಟೆ ಮೇಲೆ ಒಡೆಯುವ, ಕಂಡವರ ಭೂಮಿಗೆ ಬೇಲಿ ಹಾಕುವ ಬೆಟ್ಟಗುಡ್ಡ ಲೂಟಿ ಮಾಡಿ ವಿದೇಶಗಳಿಗೆ ಸಾಗಿಸಿ ಹಣ ಮಾಡಿಕೊಳ್ಳುವ. ಅದಕ್ಕೆ ಅಡ್ಡ ಬಂದವರ ಜೀವ ತೆಗೆಯುವ ದುಷ್ಟ ಪ್ರಜ್ಞೆ ಖಂಡಿತಾ ನನಗಿಲ್ಲ ಎಂದು  ಹೆಚ್.ಡಿಕೆ ಕಿಡಿಕಾರಿದರು.

Key words: Ramnagar -district – not – break – HD kumaraswamy- DK Shivakumar.