ರಮೇಶ್ ಜಾರಕಿಹೊಳಿ ಭೇಟಿ ಆರೋಪ: ಸಿದ್ಧರಾಮಯ್ಯ, ಡಿಕೆಶಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿರುಗೇಟು…

Promotion

ಬೆಂಗಳೂರು,ಮೇ,28,2021(www.justkannada.in):  ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿ ಅವರನ್ನ ಭೇಟಿ ಮಾಡಿದ್ದಾರೆಂಬ ವಿಪಕ್ಷ ನಾಯಕ ಸಿದ್ಧರಾಮಯ್ಯ, ಡಿ.ಕೆ ಶಿವಕುಮಾರ್ ಆರೋಪಕ್ಕೆ  ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.jk

ಈ ಕುರಿತು ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ನಾನು ಹಾಗೂ ಸರ್ಕಾರ ಈ ಕೇಸ್ ನಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ತನಿಖೆಯ ಮೇಲೆ ಪ್ರಭಾವ ಬೀರಲು ಕಾಂಗ್ರೆಸ್ ಈ ರೀತಿ ಆರೋಪ ಮಾಡುತ್ತಿದೆ. ಇದಕ್ಕೆ ನಾವು ಮಣಿಯುವುದಿಲ್ಲ. ಜಗ್ಗುವುದಿಲ್ಲ ಎಂದರು.coronavirus-vaccine-tough-action-home-minister-basavaraja-bommai

ಕೋರ್ಟ್ ಮೇಲುಸ್ತುವಾರಿಯಲ್ಲೇ ಕೇಸ್ ನ ತನಿಖೆ ನಡೆಯುತ್ತಿದೆ. ಕೋರ್ಟ್ ಗೆ ಎರಡು ವರದಿಗಳನ್ನ ಸಲ್ಲಿಸಲಾಗಿದೆ.  ಮತ್ತೊಂದು ವರದಿ ಸಲ್ಲಿಸುತ್ತೇವೆ. ಸುಮೇಂದು ಮುಖರ್ಜಿ ಅವರನ್ನ ರಜೆ ಮೇಲೆ ಕಳಿಸಿಲ್ಲ. ಅನಾರೋಗ್ಯ ಹಿನ್ನೆಲೆಯಲ್ಲಿ ರಜೆ ಮೇಲೆ ಅವರೇ ತೆರಳಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

Key words: Ramesh jarakiholi –cd-case-Home Minister -Basavaraja Bommai – Siddaramaiah,-DK shivakumar