Sunday, September 20, 2026

BDA Apartments

ನಿವೃತ್ತಿ ಬಗ್ಗೆ ಮೌನ ಮುರಿದ ರಜನಿ ಹೇಳಿದ್ದಿಷ್ಟು… ಅವರ ಕೊನೆ ಚಿತ್ರದ ಕುರಿತ...
Home Cinema ನಿವೃತ್ತಿ ಬಗ್ಗೆ ಮೌನ ಮುರಿದ ರಜನಿ ಹೇಳಿದ್ದಿಷ್ಟು… ಅವರ ಕೊನೆ ಚಿತ್ರದ ಕುರಿತ ಮಾತುಕತೆ!

ನಿವೃತ್ತಿ ಬಗ್ಗೆ ಮೌನ ಮುರಿದ ರಜನಿ ಹೇಳಿದ್ದಿಷ್ಟು… ಅವರ ಕೊನೆ ಚಿತ್ರದ ಕುರಿತ ಮಾತುಕತೆ!

ಬೆಂಗಳೂರು, ಮೇ 28, 2021 (www.justkannada.in): ನಿವೃತ್ತಿ ಬಗ್ಗೆ ರಜನಿಕಾಂತ್ ಕೊನೆಗೂ ಮೌನ ಮುರಿದಿದ್ದಾರೆ.  ಅವರ ಕೊನೆಯ ಚಿತ್ರ ಯಾವುದು ಎಂಬುದಕ್ಕೂ ಉತ್ತರ ನೀಡಿದ್ದಾರೆ.

ಕೆಲ ಆಯಕ್ಷನ್​ ದೃಶ್ಯಗಳನ್ನು ಶೂಟ್​ ಮಾಡಬೇಕು ಎನ್ನುವ ಬಯಕೆ ಅವರಿಗಿದ್ದರೂ ಅದಕ್ಕೆ ಅವರ ದೇಹ ಸ್ಪಂದಿಸುವುದಿಲ್ಲ.

ಆರೋಗ್ಯ ಪದೇ ಪದೇ ಕೈಕೊಡುತ್ತಿರುವುದು ರಜನಿಕಾಂತ್​ ಆತಂಕಕ್ಕೆ ಕಾರಣವಾಗಿದೆ.

ದೇಹ ಸ್ಪಂದಿಸಿದರೆ ಶೀಘ್ರವೇ ಒಂದೆರಡು ಚಿತ್ರಗಳ ಶೂಟಿಂಗ್​ ಮುಗಿಸುವ ಆಲೋಚನೆ ರಜನಿ ಅವರಿಗಿದೆ. ಇಲ್ಲದಿದ್ದರೆ ‘ಅಣ್ಣಾಥೆ’ ಅವರ ಕೊನೆಯ ಚಿತ್ರವಾಗಲಿದೆ.

ಇನ್ನೂ ಐದು ದಶಕಗಳ ಕಾಲ ಸಿನಿಮಾರಂಗದಲ್ಲಿ ಶ್ರಮಿಸಿದ ರಜನಿಕಾಂತ್​ 160ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ.