ರಮೇಶ್ ಜಾರಕಿಹೋಳಿ ರಾಸಲೀಲೆ ಸಿಡಿ ಪ್ರಕರಣ: ದಿನೇಶ್ ಕಲ್ಲಹಳ್ಳಿ ವಿರುದ್ಧ ಐಜಿಗೆ ದೂರು…

Ramesh Jerkiholi-opposite-Sex-CD-Release-Dinesh Kallahalli-Right now-Ulta ..!
ಕೃಪೆ- internet
Promotion

ಮಂಡ್ಯ,ಮಾರ್ಚ್,4,2021(www.justkannada.in):  ಮಾಜಿ ಸಚಿವ ರಮೇಶ್ ಜಾರಕಿಹೋಳಿ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ಬಿಡುಗಡೆ ಮಾಡಿದ ಆರ್.ಟಿಐ  ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ವಿರುದ್ದ ತನಿಖೆ ನಡೆಸುವಂತೆ  ಬೆಂಗಳೂರಿನ ಐಜಿ  ಹಾಗೂ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಲಾಗಿದೆ.Ramesh jarakihioli –Rasaleele- CD- case- complains –agianst- Dinesh Kallahalli

ಮಂಡ್ಯದ ಭಾರತ ಸಂವಿಧಾನ ಹಿತರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಪೂರ್ಣಚಂದ್ರ  ಎಂಬುವವರು ದಿನೇಶ್ ಕಲ್ಲಹಳ್ಳಿ ವಿರುದ್ಧ ದೂರು ನೀಡಿದ್ದಾರೆ. ರಾಜ್ಯದ ಪ್ರಮುಖ ರಾಜಕಾರಣಿಗಳು  ಮತ್ತು ಅಧಿಕಾರಿಗಳ ಅನೇಕ ಸಿಡಿಗಳನ್ನು ಇಟ್ಟುಕೊಂಡು ದಿನೇಶ್ ಕಲ್ಲಹಳ್ಳಿ ಬ್ಲಾಕ್ ಮೇಲ್ ಮಾಡುತ್ತಿದ್ದಾರೆಂದು ಆರೋಪಿಸಿ ದೂರು ನೀಡಿದ್ದಾರೆ.

ಹಾಗೆಯೇ ಸಚಿವರ ರಾಸಲೀಲೆ ಸಿ.ಡಿ ಬಿಡುಗಡೆ ಮಾಡಿ ಸಮಾಜದ ಸ್ವಾಸ್ಥ ಹಾಳು ಮಾಡುತ್ತಿದ್ದು, ತಕ್ಷಣವೇ ದೂರು ನೀಡಿರುವ ದಿನೇಶ್ ಕಲ್ಲಹಳ್ಳಿರನ್ನು ಬಂಧಿಸಿ ತನಿಖೆ ನಡೆಸುವಂತೆ ಪೂರ್ಣಚಂದ್ರ ಒತ್ತಾಯಿಸಿದ್ದಾರೆ.

Ramesh jarakihioli –Rasaleele- CD- case- complains –agianst- Dinesh Kallahalli
ಕೃಪೆ- internet

ತನಿಖೆ ನಡೆಸಿ ಈತನ ಬಳಿ ಸಿಡಿಗಳು ಎಷ್ಟಿವೆ.  ಇದರ ಹಿಂದೆ ಇರುವ ಪ್ರಭಾವಿಗಳು ಯಾರು ಎನ್ನುವುದನ್ನ ಬಹಿರಂಗ ಪಡಿಸಬೇಕು ಎಂದು ಮನವಿ ಮಾಡಿ ಐಜಿ  ಹಾಗೂ ಮಾನವಹಕ್ಕು ಆಯೋಗಕ್ಕೆ ಪೂರ್ಣಚಂದ್ರ ದೂರು ಸಲ್ಲಿಕೆ ಮಾಡಿದ್ದಾರೆ.

Key words: Ramesh jarakihioli –Rasaleele- CD- case- complains –agianst- Dinesh Kallahalli