ಮನವಿ ಸಲ್ಲಿಸಲು ಬಂದಿದ್ದ ವ್ಯಕ್ತಿಯಿಂದ ಶಾಸಕ ಅನಿತಾ ಕುಮಾರಸ್ವಾಮಿ ಕಾರಿಗೆ ಘೇರಾವ್: ವ್ಯಕ್ತಿ ಮೇಲೆ ಹಲ್ಲೆಗೆ ಯತ್ನ ಆರೋಪ…

Promotion

ರಾಮನಗರ,ಡಿ,11,2019(www.justkannada.in):  ತಮ್ಮ ಮನವಿಗೆ ಸ್ಪಂದಿಸಲಿಲ್ಲ ಎಂದು ವ್ಯಕ್ತಿಯೋರ್ವ ಶಾಸಕಿ ಅನಿತಾ ಕುಮಾರಸ್ವಾಮಿ ಅವರ ಕಾರಿಗೆ ಘೇರಾವ್ ಹಾಕಿದ್ದು, ಈ ವೇಳೆ ಜೆಡಿಎಸ್ ಕಾರ್ಯಕರ್ತರು ಘೇರಾವ್ ಹಾಕಿದ ವ್ಯಕ್ತಿ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ರಾಮನಗರದ ನಗರಸಭೆ ಕಾರ್ಯಾಲಯದ ಬಳಿ ಈ ಘಟನೆ ನಡೆದಿದೆ.  ಗ್ಯಾಸ್​ ಗೋಡೌನ್​ ಖಾಲಿ ಮಾಡಿಸುವಂತೆ ಮನವಿ ಸಲ್ಲಿಸಲು ರಾಜು ಎಂಬುವವರು ಆಗಮಿಸಿದ್ದರು.. ಈ ವೇಳೆ ಶಾಸಕಿ ಅನಿತಾ ಕುಮಾರಸ್ವಾಮಿ ಸರಿಯಾಗಿ ಸ್ಪಂದಿಸಲಿಲ್ಲ ಎಂದು ರಾಜು ಗಲಾಟೆ ನಡೆಸಿ, ಅನಿತಾ ಕುಮಾರಸ್ವಾಮಿ ಕಾಲಿಗೆ ಬಿದ್ದು, ಕಾರಿನ ಮುಂದೆಯೇ ಕುಳಿತು ಪ್ರತಿಭಟಿಸಿದರು.

ಈ ವೇಳೆ ಸ್ಥಳದಲ್ಲಿದ್ದ ರಾಮನಗರ ಜೆಡಿಎಸ್  ಕಾರ್ಯಕರ್ತರು ಹಾಗೂ ರಾಜು ನಡುವೆ  ವಾಗ್ವಾದ ನಡೆದಿದ್ದು, ಈ ವೇಳೆ ರಾಜು ಮೇಲೆ ಹಲ್ಲೆಗೆ ಯತ್ನಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇದನೆಲ್ಲ ಗಮನಿಸಿದ ಅನಿತಾ ಕುಮಾರಸ್ವಾಮಿ ಅವರು ಕಾರು ಹತ್ತಿ ಹೊರಟ ಪ್ರಸಂಗ ಜರುಗಿದೆ.

Key words: ramanagar-MLA- Anitha kumaraswamy-gherav-person