ರಾಯ್ ಬರೇಲಿ, ಅಮೇಥಿಯನ್ನೇ ಬಿಟ್ಟಿಲ್ಲ. ಕನಕಪುರ ಬಿಡ್ತೀವಾ..? ಶಾಸಕ ಸಿ.ಟಿ ರವಿ

Promotion

ರಾಮನಗರ,ಏಪ್ರಿಲ್,26,2023(www.justkannada.in): ರಾಮನಗರ ಜಿಲ್ಲೆ ಕನಕಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಸಚಿವ ಆರ್.ಅಶೋಕ್ ಕಣಕ್ಕಿಳಿದಿದ್ದು ಏನಾದರೂ ಸರಿ ಡಿ.ಕೆ ಶಿವಕುಮಾರ್ ರನ್ನ ಸೋಲಿಸಲೇಬೇಕೆಂದು ಬಿಜೆಪಿ ನಾಯಕರು ಪಣ ತೊಟ್ಟಿದ್ದಾರೆ.

ಈ ಹಿನ್ನೆಲೆಯಲ್ಲಿ ಇಂದು ಕನಕಪುರದಲ್ಲಿ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ,  ರಾಯ್ ಬರೇಲಿ, ಅಮೇಥಿಯನ್ನೇ ಬಿಟ್ಟಿಲ್ಲ, ಇನ್ನು ಕನಕಪುರವನ್ನ ಬಿಡ್ತೀವಾ ಎಂದು ಹೇಳಿದ್ದಾರೆ.

ಕ್ಷೇತ್ರದ ಜನರು ಮುಕ್ತವಾಗಿ ಬಂದು ಮಾತನಾಡುವಂತೆ ಆಗಬೇಕು.  ಜನರ ವಿಶ್ವಾಸ ಗಳಿಸಿ ಜನಪ್ರತಿನಿಧಿಯಾಗಬೇಕು. ಬಹಳ ಜನ ಇಲ್ಲಿ ಬಂದಾಗ ಅವರ ಪರಿಸ್ಥಿತಿ ಬಗ್ಗೆ ಹೇಳುತ್ತಾರೆ ಕನಕಪುರದಕ್ಷೇಥ್ರದಲ್ಲಿ ಹೊಂದಾಣಿಕೆ ರಾಜಕಾರಣ ನಡೆಯುತ್ತಿದೆ ಎಂದು ಸಿ.ಟಿ ರವಿ ಕಿಡಿಕಾರಿದರು.

Key words: Ramanagar-kanakapura-DK Shivakumar-bjp-CT Ravi