ಮೈಸೂರಿನ ಐಶ್(AIISH) ನಲ್ಲಿ ಏಪ್ರಿಲ್ 28 ರಂದು ಶಾಲಾಪೂರ್ವ ಪದವಿ ಪ್ರಧಾನ ಸಮಾರಂಭ.

ಮೈಸೂರು,ಏಪ್ರಿಲ್,26,2023(www.justkannada.in): ಶಾಲಾಪೂರ್ವ ಹಂತದ ಮಕ್ಕಳ ಯಶಸ್ಸನ್ನು ಆಚರಿಸುವ ಸಲುವಾಗಿ 28.04.2023 ರಂದು ಶಾಲಾಪೂರ್ವ ಪದವಿ ಪ್ರಧಾನ ಸಮಾರಂಭವನ್ನು ಮೈಸೂರಿನ ಅಖಿಲ ಭಾರತ್ ವಾಕ್ ಮತ್ತು ಶ್ರವಣ ಸಂಸ್ಥೆ, ವಿಶೇಷ ಶಿಕ್ಷಣ ವಿಭಾಗ ಆಯೋಜಿಸಿದೆ.

ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ಇಂದಿರಾ ಪ್ರಕಾಶ್ , ಮಾತು-ಭಾಷಾ ಪೆಥಾಲಾಜಿಸ್ಟ್ ಮತ್ತು ಕಿರುತೆರೆ-ಹಿರಿತೆರೆ ನಟಿಯವರು ಆಗಮಿಸಲಿದ್ದು ವಿಶೇಷ ಶಿಕ್ಷಣ ವಿಭಾಗದ ಮುಖ್ಯಸ್ಥರಾದ ಡಾ.ಪ್ರೀತಿ ವೆಂಕಟೇಶ್ ರವರು ಉಸ್ತುವಾರಿ ನಿರ್ದೇಶಕರಾದ ಪ್ರೊಫೆಸರ್ ಪಿ ಮಂಜುಳರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

2022-23ರ ಶೈಕ್ಷಣಿಕ ವರ್ಷಕ್ಕೆ ಮುಖ್ಯವಾಹಿನಿ ಶಾಲೆಯಲ್ಲಿ ಯಶಸ್ಸಿನ ಹಾದಿಯಲ್ಲಿ ಸಾಗಲು ಸಂವಹನ ತೊಂದರೆವುಳ್ಳ 86 ಮಕ್ಕಳು ಪ್ರೀಸ್ಕೂಲ್ ಪದವಿ ಪಡೆಯುತ್ತಿದ್ದಾರೆ. ಅವರಲ್ಲಿ 90%(78 ಮಕ್ಕಳು) ಮುಖ್ಯವಾಹಿನಿಗೆ ಬರುತ್ತಿದ್ದು ಉಳಿದವರು ಸಮನ್ವಯ ಶಿಕ್ಷಣ ಪಡೆಯಲು ಸಿದ್ಧರಾಗಿದ್ದಾರೆ. ಈ ಮಕ್ಕಳಿಗೆ ವ್ಯವಸ್ಥಿತ ಪಠ್ಯಕ್ರಮ ಮತ್ತು ಅವರ ಕಲಿಕೆಗೆ ಸೂಕ್ತವಾದ ಬೋಧನಾತಂತ್ರಗಳ ಬಳಕೆಯಿಂದ ಇಂದಿನ ಈ ಯಶಸ್ಸು ಸಾಧ್ಯವಾಗಿದೆ ಎಂದರೆ ತಪ್ಪಾಗಲಾರದು. ಈ ನಿಟ್ಟಿನಲ್ಲಿ ಮಕ್ಕಳ ಪೋಷಕರು ಮತ್ತು ಆರೈಕೆದಾರರ ಮಹತ್ವದ ಪಾತ್ರ ಇದೆ. ಅವರ ಪರಿಶ್ರಮದ ಫಲವೇ ಈ ದಿನದ ಮಕ್ಕಳ ಸಾಧನೆಗೆ ದಾರಿ.

key words: Pre-school –graduation- ceremony -April 28 -AIISH, Mysore.