ಇನ್ನೂ 10 ಪಾದಯಾತ್ರೆ ಮಾಡಲಿ: ಜನರ ಪ್ರೀತಿ ಇರುವವರೆಗೆ ನನ್ನನ್ನ ಅಲುಗಾಡಿಸಲು ಆಗಲ್ಲ- ಹೆಚ್.ಡಿ ಕುಮಾರಸ್ವಾಮಿ.  

Promotion

ರಾಮನಗರ,ಫೆಬ್ರವರಿ,19,2022(www.justkannada.in):  ನನ್ನನ್ನ ನನ್ನ ಕರ್ಮಭೂಮಿ ರಾಮನಗರದಿಂದ ಹೊರ ಹಾಕಲು ನೋಡುತ್ತಿದ್ದಾರೆ. ಆದರೆ ಜನರ ಪ್ರೀತಿ ಇರುವವರೆಗೆ ನನ್ನನ್ನ ಅಲುಗಾಡಿಸಲು ಆಗಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.

ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಕುರಿತು ರಾಮನಗರದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಫೆ.27 ರಿಂದ ಮೇಕೆದಾಟು ಪಾದಯಾತ್ರೆ ನಡೆಸುತ್ತಿದ್ದಾರೆ. ಪಾದಯಾತ್ರೆ ಮೂಲಕ ಅಧಿಕಾರ ಹಿಡಿಯಲು ಹೊರಟಿದ್ದಾರೆ. ಪಾದಯಾತ್ರೆಯಿಂದ ಯೋಜನೆ ಜಾರಿಯಾಗುವುದಾರೇ ನಾನು ಬರುವೆ.  ನನ್ನ ಕರ್ಮಭೂಮಿ ರಾಮನಗರದಿಂದ ನನ್ನನ್ನ ಹೊರ ಹಾಕಲು ನೋಡುತ್ತಿದ್ದಾರೆ. ಆದರೆ ಜನರ ಪ್ರೀತಿ ಇರುವವರೆ ನನ್ನನ್ನ ಅಲುಗಾಡಿಸಲು ಆಗಲ್ಲ  ಇವರು ಇನ್ನೂ ಬೇಕಾದರೇ 10 ಪಾದಯಾತ್ರೆ ಮಾಡಲಿ ಎಂದು ಕುಟುಕಿದರು.

ಹೆಚ್.ಡಿಕೆಗೆ ರಾಷ್ಟ್ರಧ್ವಜದ ಬಗ್ಗೆ ಗೊತ್ತಿಲ್ಲ ಎಂಬ ಸಿದ್ಧರಾಮಯ್ಯ ಹೇಳಿಕೆಗೆ ಟಾಂಗ್ ನೀಡಿದ ಹೆಚ್.ಡಿ ಕುಮಾರಸ್ವಾಮಿ, ರಾಷ್ಟ್ರಧ್ವಜಕ್ಕೆ ಗೌರವ ಕೊಡುವುದನ್ನ ಇವರಿಂದ ಕಲಿಯಬೇಕಿಲ್ಲ.  ರಾಜ್ಯ ಹಲವಾರು ಸಮಸ್ಯೆ ಎದುರಿಸುತ್ತಿದೆ.  ಈ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು ಎಂದು ಕಿಡಿಕಾರಿದರು.

Key words: ramanagar-former CM- HD Kumaraswamy