ಯೂಟ್ಯೂಬ್’ನಲ್ಲಿ ದಾಖಲೆ ಬರೆದ ರಕ್ಷಿತ್ ಶೆಟ್ಟಿ ‘777 ಚಾರ್ಲಿ’

Promotion

ಬೆಂಗಳೂರು, ಜೂನ್ 09, 2021 (www.justkannada.in): ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾದ ಟೀಸರ್ ಹೊಸ ದಾಖಲೆ ಬರೆದಿದೆ.

ಹೌದು. ಒಂದೇ ದಿನದಲ್ಲಿ ಇಪ್ಪತ್ತು ಮಿಲಿಯನ್ ವೀಕ್ಷಣೆಯನ್ನು ಪಡೆಯುವ ಮೂಲಕ 777 ಚಾರ್ಲಿ ‘ ಟೀಸರ್ ಸಾಕಷ್ಟು ಸದ್ದು ಮಾಡಿದೆ.

ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ಟೀಸರ್ ಬಿಡುಗಡೆ ಮಾಡಲಾಗಿತ್ತು.

ಚಿತ್ರವನ್ನು ಕಿರಣ ರಾಜ್ ನಿರ್ದೇಶನ ಮಾಡಿದ್ದು , ಲಾಕ್ ಡೌನ್ ಬಳಿಕ ಚಿತ್ರ ಬಿಡುಗಡೆಯಾಗುವ ನಿರೀಕ್ಷೆಯಿದೆ. ಅಂದಹಾಗೆ ಈ ಐದೂ ಟೀಸರ್‌ಗಳು ಒಂದೇ ದಿನದಲ್ಲಿ 20 ಮಿಲಿಯನ್ ವೀಕ್ಷಣೆ ಪಡೆದಿವೆ.