ನಮಗೆ ಈಗಲೂ ಜೆಡಿಎಸ್ ಮೇಲೆ ನಂಬಿಕೆ ಇದೆ: ಅಭ್ಯರ್ಥಿ ವಾಪಸ್ ಪಡೆಯುತ್ತಾರೆ-ಮಾಜಿ ಸಿಎಂ ಸಿದ್ಧರಾಮಯ್ಯ.

Promotion

ಬೆಂಗಳೂರು,ಜೂನ್,9,2022(www.justkannada.in): ರಾಜ್ಯಸಭೆ ಚುನಾವಣೆ ಹಿನ್ನೆಲೆ ನಮಗೆ ಈಗಲೂ ಜೆಡಿಎಸ್ ಮೇಲೆ ನಂಬಿಕೆ ಇದೆ. ಅವರು ತಮ್ಮ ಅಭ್ಯರ್ಥಿಯನ್ನ ವಾಪಸ್ ಪಡೆಯುತ್ತಾರೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿದರು.

ಈ ಕುರಿತು ಇಂದು ಮಾತನಾಡಿದ ಸಿದ್ಧರಾಮಯ್ಯ, ಜಾತ್ಯತೀತ ತತ್ವದ ಮೇಲೆ ಮೇಲೆ ನಂಬಿಕೆ ಇದ್ದರೆ ಜೆಡಿಎಸ್ ಅಭ್ಯರ್ಥಿಯನ್ನು ಕಣದಿಂದ ನಿವೃತ್ತಿಗೊಳಿಸಬೇಕು. ನಮಗೂ ಈಗಲೂ ಜೆಡಿಎಸ್ ಮೇಲೆ ನಂಬಿಕೆ ಇದ್ದು, ಕೊನೆ ಗಳಿಗೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ವಾಪಸ್ ಪಡೆಯುತ್ತದೆ. ಅಲ್ಪಸಂಖ್ಯಾತರ ಮೇಲೆ ಕಾಳಜಿ ಇದ್ದರೆ ಜೆಡಿಎಸ್ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡಲಿ ಎಂದು ಆಗ್ರಹಿಸಿದರು.

ಇನ್ನು ಪಠ್ಯಪುಸ್ತಕ ಪರಿಷ್ಕರಣೆ ಸಂಬಂಧ ಮಾತನಾಡಿದ ಸಿದ್ಧರಾಮಯ್ಯ, ರೋಹಿತ್ ಚಕ್ರತೀರ್ಥ ಸಮಿತಿಯನ್ನ ವಜಾ ಮಾಡಬೇಕು. ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿದ್ದೇವೆ. ಇತಿಹಾಸ ತಿರುಚುವ ಕೆಲಸ ಮಾಡಿದ್ದಾರೆ.  ಅಂಬೇಡ್ಕರ್ ಬಸವಣ್ಣನಿಗೆ ಅಪಮಾನ ಮಾಡಲಾಗಿದೆ.  ದಾರ್ಶನಿಕರು ಸಂತರ ಬದಕು ತಿರುಚಿದ್ದಾರೆ. ಪಠ್ಯವನ್ನ ಕೇಸರೀಕರಣ ಮಾಡುವ ಹುನ್ನಾರವಿದೆ ಎಂದು ಆರೋಪಿಸಿದರು.

Key words: rajyasabha-election-JDS-candidate –will-return.Former CM- Siddaramaiah.