ಮಲ್ಲಿಕಾರ್ಜುನ ಖರ್ಗೆ. ಪರಮೇಶ್ವರ್ ಬಳಿಕ ಈಗ ಡಿಕೆಶಿಯನ್ನೂ ಮುಗಿಸುತ್ತಾನೆ- ಏಕವಚನದಲ್ಲೇ ಸಿದ‍್ಧರಾಮಯ್ಯ ವಿರುದ್ಧ ಸಚಿವ ಶ್ರೀರಾಮುಲು ವಾಗ್ದಾಳಿ..

ಕೊಪ್ಪಳ.ಜೂನ್.9,2022(www.justkannada.in): ನಾನು ಮಾತನಾಢಿದರೇ ವಿರೋಧಿಗಳು ಸೀಳುನಾಯಿಗಳಂತೆ ಮುಗಿಬೀಳುತ್ತಾರೆ ಎಂದು ಹೇಳಿಕೆ ನೀಡಿದ್ಧ ವಿಪಕ್ಷ ನಾಯಕ ಸಿದ್ಧರಾಮಯ್ಯ ವಿರುದ್ಧ ಸಾರಿಗೆ ಸಚಿವ ಶ್ರೀರಾಮಯಲು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಮಾಧ್ಯಮಗಳ ಜತೆ ಇಂದು ಮಾತನಾಡಿದ ಸಚಿವ ಶ್ರೀರಾಮುಲು, ಮಾಜಿ ಸಿಎಂ ಸಿದ್ದರಾಮಯ್ಯ ಸತ್ಯ ಹರಿಶ್ಚಂದ್ರನ ತರ ಮಾತನಾಡುತ್ತಾನೆ. ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಮಾತನ್ನೂ ಯಾರೂ ಕೇಳಲ್ಲ. ಬಾದಾಮಿಯಲ್ಲಿ ಬಿಬಿ ಚಿಮ್ಮನಕಟ್ಟಿ, ಎಸ್.ಆರ್ ಪಾಟೀಲ್ ಮುಗಿಸಿದರು.ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ್ ಮುಗಿಸಿದ್ದಾರೆ. ಇದೀಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನನ್ನು ಮುಗಿಸಲಿದ್ದಾನೆ. ಎಲ್ಲೆಲ್ಲಿ ಸಿದ್ಧರಾಮಯ್ಯ ಹೋಗುತ್ತಾರೆ ಅಲ್ಲೆಲ್ಲಾ ಮುಗಿಸುತ್ತಾನೆ ಎಂದು ಹರಿಹಾಯ್ದರು.

ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಮಾತನ್ನೂ ಯಾರೂ ಕೇಳಲ್ಲ.ಸಿದ್ಧರಾಮಯ್ಯ ಮಾತಿಗೆ ಕಿಮ್ಮತ್ತು ಇಲ್ಲ.   ಕಾಂಗ್ರೆಸ್ ನಲ್ಲಿ ಸಿದ್ದು ಮಾತಿಗೆ ಬೆಲೆ ಇಲ್ಲ. ಸಿದ್ದರಾಮಯ್ಯ ಪಾರ್ಟಿಯಲ್ಲಿ ಚೆಸ್ ಆಡ್ತಿದ್ದಾನೆ. ಡಿ.ಕೆಶಿ ಮುಗಿಸಲು ಆಟ ಆಡುತ್ತಿದ್ದಾನೆ. ಟಿಆರ್ ಪಿಗಾಗಿ ಗಿ ಮೋದಿ ಆರ್ ಎಸ್ ಎಸ್ ಬೈತಾನೆ. ಸಚಿವ ಬಿ.ಶ್ರೀರಾಮುಲು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

Key words: Mallikarjuna khage-Parameswar-finished – Minister –Sri ramulu-against- Siddaramaiah