ಅಮೆರಿಕಾದಲ್ಲಿ ರಜನಿ ಆರೋಗ್ಯ ತಪಾಸಣೆ

Promotion

ಬೆಂಗಳೂರು, ಜೂನ್ 17, 2021 (www.justkannada.in): ನಟ ರಜನೀಕಾಂತ್‌ ಅನಾರೋಗ್ಯ ತಪಾಸಣೆಗಾಗಿ ವಿಶೇಷ ವಿಮಾನದಲ್ಲಿ ಅಮೆರಿಕಾಗೆ ತೆರಳಿದ್ದಾರೆ,

ರಜನಿಕಾಂತ್ ಅಮೆರಿಕಾಗೆ ತೆರಳಿರುವ ಸುದ್ದಿ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಆದರೆ ರಜಿನಿಕಾಂತ್ ಅನಾರೋಗ್ಯದ ಬಗ್ಗೆ ಹಬ್ಬಿರುವ ವದಂತಿಗಳು ಸತ್ಯವಲ್ಲ.

ರಜಿನಿಕಾಂತ್ ನಿಯಮಿತವಾಗಿ ಆರೋಗ್ಯ ತಪಾಸಣೆಗಾಗಿ ಅಮೆರಿಕಾಕ್ಕೆ ತೆರಳಿದ್ದಾರೆ. ಪ್ರಸ್ತುತ ಕೊರೊನಾ ಪರಿಸ್ಥಿತಿಗಳಲ್ಲಿ ವಿದೇಶ ಪ್ರಯಾಣಕ್ಕೆ ನಿರ್ಬಂಧಗಳಿವೆ. ಹೀಗಾಗಿ ವಿಶೇಷ ವಿಮಾನದಲ್ಲಿ ತೆರಳಿದ್ದಾರೆ ಎನ್ನಲಾಗಿದೆ.

ಕೇಂದ್ರ ಸರ್ಕಾರ ಅನುಮತಿ ನೀಡಿದ ನಂತರ ವಿಶೇಷ ವಿಮಾನದಲ್ಲಿ ಕುಟುಂಬ ಸದಸ್ಯರೊಂದಿಗೆ ಅಮೆರಿಕಾಗೆ ತೆರಳಿದ್ದಾರೆ.