Wednesday, August 12, 2026

BDA Apartments

Home Front Page ಸಿಎಂ ಬಿಎಸ್ ಯಡಿಯೂರಪ್ಪ ಏನ್ ರೆಡಿಮೇಡ್ ಫುಡ್ಡಾ..? ಶಾಸಕ ಎಂ.ಪಿ ರೇಣುಕಾಚಾರ್ಯ ಕಿಡಿ.

ಸಿಎಂ ಬಿಎಸ್ ಯಡಿಯೂರಪ್ಪ ಏನ್ ರೆಡಿಮೇಡ್ ಫುಡ್ಡಾ..? ಶಾಸಕ ಎಂ.ಪಿ ರೇಣುಕಾಚಾರ್ಯ ಕಿಡಿ.

ಬೆಂಗಳೂರು,ಜೂನ್,17,2021(www.justkannada.in): ನಮ್ಮ ವೈಯಕ್ತಿಕ ಕೆಲಸಕ್ಕೆ ದೆಹಲಿಗೆ ಹೋಗ್ತೀವಿ ಅಂತಾರೆ. ಆದರೆ ಅಲ್ಲಿ ಚರ್ಚೆ ಮಾಡೋದೆ ಬೇರೆ.  ನಮ್ಮಲ್ಲಿ ಕೆಲವರು ಮುಖ್ಯಮಂತ್ರಿಯಾಗಲು ಕನಸು ಕಾಣುತ್ತಿದ್ದಾರೆ. ಆಗಾದ್ರೆ ಸಿಎಂ ಬಿಎಸ್ ಯಡಿಯೂರಪ್ಪ ಏನ್ ರೆಡಿಮೇಡ್ ಫುಡ್ಡಾ..?  ಎಂದು ಶಾಸಕ ಎಂ.ಪಿ ರೇಣುಕಾಚಾರ್ಯ ಕಿಡಿಕಾರಿದರು.jk

ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಅಸಮಾಧಾನ ವ್ಯಕ್ತಪಡಿಸಿ ಮಾತನಾಡಿದ ಶಾಸಕ ಎಂ.ಪಿ ರೇಣುಕಾಚಾರ್ಯ,  ಬಿಎಸ್ ವೈ ನಾಯಕತ್ವ  ಪ್ರಶ್ನೆ ಮಾಡುವ ಅಧಿಕಾರವಿಲ್ಲ.  ಬಿಎಸ್ ವೈರನ್ನ  ಪ್ರಶ್ನೆ ಮಾಡುವ ನೈತಿಕತೆ ಯಾರಿಗೂ ಇಲ್ಲ ಎಂದರು.

ನಾವು ಸಹಿಸಂಗ್ರಹ ಮಾಡಿದ್ದು  ಸತ್ಯ. ಆದರೆ  ಸಿಎಂ ಬಿಎಸ್ ಯಡಿಯೂರಪ್ಪ, ರಾಜ್ಯಾಧ್ಯಕ್ಷರು ಸೂಚನೆ ನೀಡಿದ ಬಳಿಕ ಅದನ್ನ ಸ್ಥಗಿತಗೊಳಿಸಿದವು. ಗೊಂದಲ ಮೂಡಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Key words:  CM BS Yeddyurappa –change- MLA-MP Renukacharya