ರಾಜಕಾಲುವೆ ಒತ್ತುವರಿ ತೆರವು ಪುನಾರಂಭ: ಜಲಮಂಡಳಿ ಸೇತುವೆ ಡೆಮಾಲಿಷನ್.

ಬೆಂಗಳೂರು,ಸೆಪ್ಟಂಬರ್,19,2022(www.justkannada.in): ಬಿಬಿಎಂಪಿ ಅಧಿಕಾರಿಗಳು ರಾಜಕಾಲುವೆ ಒತ್ತುವರಿ ತೆರವು ಕಾರ್ಯ ಪುನಾರಂಭ ಮಾಡಿದ್ದು, ಮಹದೇವಪುರ ವ್ಯಾಪ್ತಿಯಲ್ಲಿ ತೆರವು ಕಾರ್ಯ ಮುಂದುವರೆದಿದೆ.

ಮಾರತ್ತಹಳ್ಳಿ ಬಳಿ  ಜಲಮಂಡಳಿ ಸೇತುವೆ ಡೆಮಾಲಿಷನ್  ಮಾಡಲಾಗುತ್ತಿದೆ. ಮಾರತ್ತಹಳ್ಳಿ ಠಾಣೆಯ ಹಿಂದಿರುವ  ಜಲ ಮಂಡಳಿ ಸೇತುವೆಯನ್ನ ತೆರವು ಮಾಡಲಾಗಿದೆ. ಬೆಳ್ಳಂದೂರು ಕೆರೆ ಕೋಡಿಗೆ ಅಡ್ಡಲಾಗಿ ಈ ಸೇತುವೆಯನ್ನ ನಿರ್ಮಿಸಲಾಗಿದೆ. ಸೇತುವೆಯಿಂದ ಪ್ರವಾಹ ಸೃಷ್ಠಿ ಹಿನ್ನೆಲೆ ಡೆಮಾಲಿಷನ್ ಮಾಡಲಾಗಿದೆ.

ಪೂರ್ವ ಪ್ರಾರ್ಕ್ರಿಡ್ ವಿಲ್ಲಾಗಳ ಬಳಿ ಶೆಡ್ ಗಳ ತೆರವು ಕಾರ್ಯ ಮಾಡಲಾಗುತ್ತಿದ್ದು,  ಶೆಡ್ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದಾರೆ. ಏಕಾ ಏಕಿ ಮಧ್ಯಭಾಗದಲ್ಲಿರುವ ಶೆಡ್ ಗಳ ತೆರವಿಗೆ  ವಿರೋಧಿಸಿದ್ದು, ಒಂದು ಕಡೆಯಿಂದ ತೆರವು ಮಾಡುವಂತೆ ಆಗ್ರಹಿಸಿದ್ದಾರೆ.

Key words: Rajkaluve- encroachment-clearance-bangalore