ಇಡಿ ವಿಚಾರಣೆಗೆ ಹಾಜರಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್.

ನವದೆಹಲಿ,ಸೆಪ್ಟಂಬರ್,19,2022(www.justkannada.in):  ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಮುಂದೆ ವಿಚಾರಣೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಜರಾಗಿದ್ದಾರೆ.

ಭಾರತ್ ಜೋಡೋ ಯಾತ್ರೆಯ ಹುಮ್ಮಸ್ಸಿನಲ್ಲಿದ್ಧ ಡಿ.ಕೆ ಶಿವಕುಮಾರ್ ಗೆ ಇಡಿ ಶಾಕ್ ನೀಡಿದೆ.  ದೆಹಲಿಯ ವಿದ್ಯುತ್ ಲೇನ್ ನಲ್ಲಿರುವ ಇಡಿ ಕಚೇರಿಗೆ ವಿಚಾರಣೆಗೆ ಡಿ.ಕೆ ಶಿವಕುಮಾರ್ ಹಾಜರಾಗಿದ್ದಾರೆ.

ಅಕ್ರಮ ಹಣ ವರ್ಗವಣೆ ವಿಚಾರವಾಗಿ ಡಿಕೆ ಶಿವಕುಮಾರ್ ಗೆ  ಇಡಿ ಸಮನ್ಸ್ ನೀಡಿತ್ತು. ಡಿಕೆ ಶಿವಕುಮಾರ್ ಸಚಿವರಾಗಿದ್ದಾಗ ಆದಾಯದಲ್ಲಿ ಏರಿಕೆ ಆರೋಪ ಹಿನ್ನೆಲೆ ಸಿಬಿಐ ದಾಖಲಿಸಿರುವ ಎಫ್ ಐಆರ್ ಮೇಲೆ  ಡಿಕೆ ಶಿವಕುಮಾರ್ ಗೆ ಸಮನ್ಸ್  ನೀಡಲಾಗಿತ್ತು.

Key words: KPCC-President-DK Shivakumar-attend- ED-hearing.