ಅಕ್ಟೋಬರ್‌ 14ರಂದು ರಜನಿಕಾಂತ್ ‘ಅನ್ನಾತೆ’ ಟೀಸರ್ ರಿಲೀಸ್

Promotion

ಬೆಂಗಳೂರು, ಅಕ್ಟೋಬರ್ 12, 2021 (www.justkannada.in): ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ‘ಅನ್ನಾತೆ’ ಚಿತ್ರದ ಟೀಸರ್ ಅಕ್ಟೋಬರ್‌ 14ರಂದು ಬಿಡುಗಡೆಯಾಗಲಿದೆ.

ಶಿವ ನಿರ್ದೇಶನದ ಬಹುನಿರೀಕ್ಷೆಯ ಚಿತ್ರದ ಟೀಸರ್ ಅಂದು ಸಂಜೆ 6 ಗಂಟೆಗೆ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

ಸನ್ ಪಿಕ್ಚರ್ಸ್ ಬ್ಯಾನರ್ ನಡಿ ಕಲಾನಿಥಿ ಮಾರನ್ ಈ ಸಿನಿಮಾ ನಿರ್ಮಾಣ ಮಾಡಿದ್ದು, ಟೀಸರ್ ಬಿಡುಗಡೆ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಚಿತ್ರತಂಡ ಹಂಚಿಕೊಂಡಿದೆ.

ಚಿತ್ರದಲ್ಲಿ ಖುಷ್ಬು, ನಯನತಾರ, ಕೀರ್ತಿ ಸುರೇಶ್, ಪ್ರಕಾಶ್ ರಾಜ್, ಮೀನಾ, ಜಗಪತಿ ಬಾಬು, ಸತೀಶ್ ಸೇರಿದಂತೆ ಹಲವು ಖ್ಯಾತನಾಮರು ನಟಿಸಿದ್ದಾರೆ.

ಸಾಕಷ್ಟು ದಿನಗಳ ಬಳಿಕ ರಜನಿ ಸಿನಿಮಾವನ್ನು ತೆರೆಮೇಲೆ ವೀಕ್ಷಿಸಲು ಆವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

key words: Rajinikanth’s Annaatthe teaser release on October 14