ನಿವೃತ್ತಿ ಬಗ್ಗೆ ಮೌನ ಮುರಿದ ರಜನಿ ಹೇಳಿದ್ದಿಷ್ಟು… ಅವರ ಕೊನೆ ಚಿತ್ರದ ಕುರಿತ ಮಾತುಕತೆ!

Promotion

ಬೆಂಗಳೂರು, ಮೇ 28, 2021 (www.justkannada.in): ನಿವೃತ್ತಿ ಬಗ್ಗೆ ರಜನಿಕಾಂತ್ ಕೊನೆಗೂ ಮೌನ ಮುರಿದಿದ್ದಾರೆ.  ಅವರ ಕೊನೆಯ ಚಿತ್ರ ಯಾವುದು ಎಂಬುದಕ್ಕೂ ಉತ್ತರ ನೀಡಿದ್ದಾರೆ.

ಕೆಲ ಆಯಕ್ಷನ್​ ದೃಶ್ಯಗಳನ್ನು ಶೂಟ್​ ಮಾಡಬೇಕು ಎನ್ನುವ ಬಯಕೆ ಅವರಿಗಿದ್ದರೂ ಅದಕ್ಕೆ ಅವರ ದೇಹ ಸ್ಪಂದಿಸುವುದಿಲ್ಲ.

ಆರೋಗ್ಯ ಪದೇ ಪದೇ ಕೈಕೊಡುತ್ತಿರುವುದು ರಜನಿಕಾಂತ್​ ಆತಂಕಕ್ಕೆ ಕಾರಣವಾಗಿದೆ.

ದೇಹ ಸ್ಪಂದಿಸಿದರೆ ಶೀಘ್ರವೇ ಒಂದೆರಡು ಚಿತ್ರಗಳ ಶೂಟಿಂಗ್​ ಮುಗಿಸುವ ಆಲೋಚನೆ ರಜನಿ ಅವರಿಗಿದೆ. ಇಲ್ಲದಿದ್ದರೆ ‘ಅಣ್ಣಾಥೆ’ ಅವರ ಕೊನೆಯ ಚಿತ್ರವಾಗಲಿದೆ.

ಇನ್ನೂ ಐದು ದಶಕಗಳ ಕಾಲ ಸಿನಿಮಾರಂಗದಲ್ಲಿ ಶ್ರಮಿಸಿದ ರಜನಿಕಾಂತ್​ 160ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ.