ರಾಜ್ಯದಲ್ಲಿ ನಾಳೆಯಿಂದ ನಾಲ್ಕುದಿನಗಳ ಕಾಲ ಮಳೆ ಸಾಧ್ಯತೆ: ಹವಮಾನ ಇಲಾಖೆ ಮುನ್ಸೂಚನೆ.

Promotion

ಬೆಂಗಳೂರು,ಡಿಸೆಂಬರ್,6,2022(www.justkannada.in): ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿದ ಹಿನ್ನೆಲೆ, ರಾಜ್ಯದಲ್ಲಿ ನಾಳೆಯಿಂದ ನಾಲ್ಕು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಮಳೆರಾಯ ಅಬ್ಬರಿಸಲಿದ್ದಾನೆ. ಬೆಂಗಳೂರಿನಲ್ಲಿ ಗುಡುಗು ಮಿಂಚು ಸೇರಿ ಮಳೆಯಾಗುವ ಸಾಧ್ಯತೆ ಇದೆ.  ಚಿಕ್ಕಬಳ್ಳಾಪುರ, ಕೋಲಾರ, ಕೊಡಗು, ರಾಮನಗರ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದೆ ಎನ್ನಲಾಗಿದೆ.

ಹಾಗೆಯೇ ಕರಾವಳಿಯ  ಉಡುಪಿ, ಉತ್ತರಕನ್ನಡ, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಭಾರಿ ಮಳೆಯಾಗುವ ಸಾಧ್ಯತೆ  ಇದೆ ಎಂದು ಹವಮಾನ ಇಲಾಖೆ ತಿಳಿಸಿದೆ.

Key words: Rain-four days – state-Meteorological department