ಕರ್ನಾಟಕದಲ್ಲಿ ರಾಹುಲ್ ಗಾಂಧಿ ಮಾತಿಗೆ ಬೆಲೆ ಕೊಡಲ್ಲ: ಕಾಂಗ್ರೆಸ್ ನವರದ್ದು ವಿಸಿಟಿಂಗ್ ಕಾರ್ಡ್- ಸಿಎಂ ಬೊಮ್ಮಾಯಿ ಟೀಕೆ.

Promotion

ಬೆಂಗಳೂರು,ಮಾರ್ಚ್,21,2023(www.justkannada.in): ರಾಹುಲ್ ಗಾಂಧಿ ಮಾತಿಗೆ ಕರ್ನಾಟಕದ ಜನರು ಬೆಲೆ ಕೊಡಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ರಾಹುಲ್ ಗಾಂಧಿ ಕಳೆದ ಬಾರಿ ಭೇಟಿಗೂ ಈ ಬಾರಿ ಭೇಟಿಗೂ ವ್ಯತ್ಯಾಸವಿದೆ. ರಾಹುಲ್ ಗಾಂಧಿ ಪ್ರಜಾಪ್ರಭುತ್ವ ವಿರೋಧಿ ಮಾತುಗಳನ್ನಾಡಿದ್ದಾರೆ. ಸಿದ್ದರಾಮಯ್ಯ ಬೋಗಸ್ ಕಾರ್ಡ್ ಬಗ್ಗೆ ಮಾತನಾಡುತ್ತಿದ್ದಾರೆ. ಬೇರೆ ರಾಜ್ಯಗಳಲ್ಲಿ ಕೊಟ್ಟಿದ್ದ ಭರವಸೆಯನ್ನೇ ಕಾಂಗ್ರೆಸ್ ಈಡೇರಿಸಿಲ್ಲ. ಕಾಂಗ್ರೆಸ್ ಜನರನ್ನ ಯಾಮಾರಿಸುವ ಕೆಲಸ ಮಾಡುತ್ತಿದೆ ಕಾಂಗ್ರೆಸ್ ನವರದ್ದು ಗ್ಯಾರಂಟಿ ಕಾರ್ಡ್ ಅಲ್ಲ. ವಿಸಿಟಿಂಗ್ ಕಾರ್ಡ್ ಎಂದು ವ್ಯಂಗ್ಯವಾಡಿದರು.

ಲೋಕಾಯುಕ್ತದಲ್ಲಿ ಸಿದ್ಧರಾಮಯ್ಯ ವಿರುದ್ಧ ಕೇಸ್ ದಾಖಲಾಗಿದೆ. ವಿಪಕ್ಷಗಳ 59 ಕೇಸ್ ಗಳ ಪೈಕಿ ಕೆಲವನ್ನ ಲೋಕಾಯುಕ್ತಕ್ಕೆ ಕೊಟ್ಟಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

Key words: Rahul Gandhi-talk – not valued – Karnataka-  CM Bommai.