ಕೋಲಾರದಲ್ಲಿ ಸ್ಪರ್ಧಿಸಬೇಡಿ ಎಂದು ರಾಹುಲ್ ಗಾಂಧಿ ಹೇಳಿಯೇ ಇಲ್ಲ- ಸಿದ್ಧರಾಮಯ್ಯ ಸ್ಪಷ್ಟನೆ.

ಬೆಂಗಳೂರು,ಮಾರ್ಚ್,21,2023(www.justkannada.in):  ಕೋಲಾರದಿಂದ ಸ್ಪರ್ಧಿಸದಂತೆ ಸಿದ್ಧರಾಮಯ್ಯಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲಹೆ ನೀಡಿದ್ದಾರೆ ಎಂಬ ಸುದ್ದಿ ಹಬ್ಬಿರುವ ಹಿನ್ನೆಲೆ ಈ ಕುರಿತು ಸ್ವತಃ ಮಾಜಿ ಸಿಎಂ ಸಿದ‍್ಧರಾಮಯ್ಯ ಅವರೇ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಸಿದ್ಧರಾಮಯ್ಯ, ಕೋಲಾರದಲ್ಲಿ ಸ್ಪರ್ಧಿಸಬೇಡಿ ಎಂದು ರಾಹುಲ್ ಗಾಂಧಿ ಹೇಳಿಲ್ಲ. 1 ಪರ್ಸೆಂಟ್ ರಿಸ್ಕ್ ತೆಗೆದುಕೊಳ್ಳಬೇಡಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಸ್ಪರ್ಧೆ ವಿಚಾರದಲ್ಲಿ ಸುಮ್ಮನೆ ಅಪಪ್ರಚಾರ ಮಾಡುತ್ತಿದ್ದಾರೆ. ನೀವು ರಾಜ್ಯಾದ್ಯಂತ ಪ್ರವಾಸ ಮಾಡಬೇಕು ಎಂದಿದ್ದಾರೆ. ನನ್ನ ಸ್ಪರ್ಧೆ ವಿಚಾರ ವರಿಷ್ಠರ ನಿರ್ಧಾರಕ್ಕೆ ಬಿಟ್ಟಿದ್ದು ಎಂದರು.

ಕೋಲಾರದ ಸ್ಪರ್ಧೆ ವಿಚಾರ ಇನ್ನೂ ಇತ್ಯರ್ಥ ಆಗಿಲ್ಲ. ರಿಸ್ಕ್ ತೆಗೆದುಕೊಳ್ಳದಂತೆ ಹೇಳಿದ್ದಾರೆ. ಹೈಕಮಾಂಡ್ ಬೇರೆನು ಹೇಳಿಲ್ಲ. ಚುನಾವಣಾ ಪ್ರಚಾರಕ್ಕೆ ರಾಜ್ಯದಲ್ಲಿ  ಓಡಾಡಬೇಕು.  ಕೋಲಾರಕ್ಕೆ ಒಂ ದಿನ ಪ್ರಚಾರಕ್ಕೆ ಹೋಗಬಾರದು. ಕೋಲಾರಕ್ಕೆ ಸಮಯ ಕೊಡಲು ಆಗಲ್ಲ ಎಂದಿದ್ದೆ. ಕೋಲಾರ ವಿಚಾರ ಪೆಂಡಿಂಗ್ ಇಟ್ಟಿದ್ದೇನೆ. ಆದರೆ ಕೋಲಾರದಿಂದ ಹಿಂದೆ ಸರಿದ್ರು  ಎಂದು ಅಪಪ್ರಚಾರವಾಗುತ್ತಿದೆ ಎಂದು ಸಿದ್ಧರಾಯ್ಯ ತಿಳಿಸಿದರು.

Key words: not – contest – Kolar-Siddaramaiah -clarified.