ಇಡಿ ಮುಂದೆ ಬಿಟ್ಟು ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ: ಮೋದಿ ವಿರುದ್ಧ ರಾಹುಲ್ ಗುಡುಗು

congress-leader-rahul-gandhi-demands-free-covid-vaccine
Promotion

ಬೆಂಗಳೂರು, ಆಗಸ್ಟ್ 05, 2022 (www.justkannada.in): ಜಾರಿ ನಿರ್ದೇಶನಾಲಯದ ಅಧಿಕಾರಿಗಳನ್ನು ಹಿಡಿದುಕೊಂಡು ನಮ್ಮನ್ನು ಹೆದರಿಸಲಾಗದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರನ್ನು ಕಂಡರೆ ನಮಗೇನು ಭಯ ಇಲ್ಲ. ಇಡಿ ಮತ್ತಿತರ ಪ್ರಕ್ರಿಯೆಗಳಿಂದ ನಮ್ಮನ್ನು ಹೆದರಿಸುವ ಪ್ರಯತ್ನದಲ್ಲಿ ಅವರು ಯಶಸ್ಸು ಕಾಣುವುದಿಲ್ಲ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ ಕಚೇರಿ, ಸೋನಿಯಾ ಗಾಂಧಿ ಹಾಗೂ ತಮ್ಮ ನಿವಾಸ ಸಂಪರ್ಕಿಸುವ ರಸ್ತೆಗಳನ್ನು ಬಂದ್ ಮಾಡಿ, ಯಂಗ್ ಇಂಡಿಯಾ ಕಂಪನಿಗೆ ಬೀಗ ಮುದ್ರೆ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾಪ್ರಭುತ್ವ ರಕ್ಷಿಸಲು ಹಾಗೂ ಸೌಹಾರ್ದಯುತ ವಾತಾವರಣವನ್ನು ದೇಶದಲ್ಲಿ ಕಾಯ್ದುಕೊಳ್ಳಲು ನಾನು ನನ್ನ ಕೆಲಸ ಮುಂದುವರಿಸುತ್ತೇನೆ ಎಂದಿದ್ದಾರೆ.