ಸ್ಥಾನಮಾನ ಇಲ್ಲದ ರಾಹುಲ್ ಗಾಂಧಿ ಹಿಂದೆ ಯಾಕೆ ಓಡೋಡಿ ಹೋಗ್ತೀರಾ…? ಸಿದ್ಧರಾಮಯ್ಯ ಹೇಳಿಕೆಗೆ ಸಚಿವ ಸುಧಾಕರ್ ಟಾಂಗ್.

Promotion

ಬೆಂಗಳೂರು,ಜನವರಿ,4,2023(www.justkannada.in): ಮೋದಿ ಬಳಿ ಸಿಎಂ ಬಸವರಾಜ ಬೊಮ್ಮಾಯಿ ನಾಯಿಮರಿ ತರ ಇರ್ತಾರೆ ಎಂದಿದ್ದ ವಿಪಕ್ಷ ನಾಯಕ ಸಿದ್ಧರಾಮಯ್ಯಗೆ ಟಾಂಗ್ ನೀಡಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಸ್ಥಾನಮಾನ ಇಲ್ಲದ ರಾಹುಲ್ ಗಾಂಧಿ ಹಿಂದೆ ಯಾಕೆ ಓಡೋಡಿ ಹೋಗ್ತೀರಾ…? ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಸುಧಾಕರ್, ಪ್ರಧಾನಿ ಮೋದಿಗೆ ಗೌರವ ಕೊಡೋದು ಈ ನೆಲೆದ ಪರಂಪರೆ. ಸ್ಥಾನ ಮಾನ ಇಲ್ಲದ ರಾಹುಲ್  ಗಾಂಧಿ ಹಿಂದೆ  ಓಡ್ತೀರಿ. ರಾಹುಲ್ ಗಾಂಧಿ ಹಿಂದೆ ಯಾಕೆ ಓಡೋಡಿ ಹೋಗುತ್ತೀರಾ.  ಮೋದಿ ಸ್ಥಾನಮಾನ ಮೋದಿ ಅವರ ವಯಸ್ಸು ಏನು.  ಗೌರವಕ್ಕೆ ತಕ್ಕಂತೆ ಮಾತನಾಡುವುದನ್ನ ಕಲಿಯಿರಿ. ಮೋದಿ ವಿಶ್ವನಾಯಕ. ಹಾಲಿ ಸ್ಥಾನಮಾನ ಇರುವವರು.  ಪ್ರಧಾನಿ ಮದಿ ಬಳಿ ವಿನಯದಿಂದ ಸಿಎಂ ಬೊಮ್ಮಾಯಿ ಇರುತ್ತಾರೆ ಎಂದರು.

ಸಿಎಂ ಆಗಿದ್ದವರು ಸಣ್ಣತನದ ಹೇಳಿಕೆ ನೀಡಬಾರದು. ಸಿದ್ಧರಾಮಯ್ಯ ನಡವಳಿಕೆ ನಮ್ಮಂಥವರಿಗೆ ಮಾರ್ಗದರ್ಶಿಯಾಗಿರಬೇಕು ಅದನ್ನು ಬಿಟ್ಟು ಸಣ್ಣತನದ ಹೇಳಿಕೆ ಬೇಡ . ಅಭಿವೃದ್ದಿ ಬಗ್ಗೆ ಯಾಕೆ ಚರ್ಚಿಸಿಲು ಸಿಎಂ, ನಾವು ಬರ್ತೇವೆ ಬನ್ನಿ  ಎದು ಸವಾಲು ಸ್ವೀಕರಿಸಿದರು.

Key words: Rahul Gandhi –siddaramaiah-Minister -Sudhakar -Tong