ಎಐಸಿಸಿ ಅಧ್ಯಕ್ಷರಾಗಿ ರಾಹುಲ್ ಗಾಂಧಿ ನೇಮಕವಾಗಲಿ- ಸೋನಿಯಾ ಗಾಂಧಿಗೆ ಮಾಜಿ ಸಿಎಂ ಸಿದ್ಧರಾಮಯ್ಯ ಪತ್ರ…

Promotion

ಬೆಂಗಳೂರು,ಆ,24,2020(www.justkannada.in): ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ಅವರನ್ನು ನೇಮಕ ಮಾಡಿ ಎಂದು ಮನವಿ ಮಾಡಿ  ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಮಾಜಿ ಸಿಎಂ ಸಿದ್ಧರಾಮಯ್ಯ ಪತ್ರ ಬರೆದಿದ್ದಾರೆ.jk-logo-justkannada-logo

ಇಂದು ನಡೆಯುತ್ತಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಸೋನಿಯಾ ಗಾಂಧಿ ಅವರು ಪ್ರಸ್ತಾಪಿಸಿದ್ದಾರೆ.  ಈ  ನಡುವೆ ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ ನಾಯಕತ್ವದ ಗೊಂದಲ ಹಾಗೂ ಭಿನ್ನಾಭಿಪ್ರಾಯ ಸ್ಫೋಟಗೊಂಡಿದೆ.

ಪಕ್ಷದ ನಾಯಕತ್ವದ ಕುರಿತಾಗಿ ಪತ್ರವನ್ನು ಬರೆದ 23 ಮಂದಿ ಹಿರಿಯ ಮುಖಂಡರ ಬಗ್ಗೆ  ಕಾಂಗ್ರೆಸ್ ಕಾರ್ಯಕಾರಣಿ ಸಭೆಯಲ್ಲಿ ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದು, ಇದೇ ವೇಳೆ ಸೋನಿಯಾ ಗಾಂಧಿ ಅವರಿಗೆ ಮಾಜಿ ಸಿಎಂ ಸಿದ್ಧರಾಮಯ್ಯ ಪತ್ರ ಬರೆದು ಎಐಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ರಾಹುಲ್ ಗಾಂಧಿ ಪರ ಬ್ಯಾಟ್ ಬೀಸಿದ್ದಾರೆ.rahul-gandhi-appoint-aicc-president-former-cm-siddaramaiah-letter-sonia-gandhi

ಗಾಂಧಿ ಕುಟುಂಬದಿಂದಲೇ ಮಾತ್ರ ಪಕ್ಷ ಉಳಿಯಲು ಸಾಧ್ಯ. ಹೀಗಾಗಿ ಗಾಂಧಿ ಕುಟುಂಬವೇ ಪಕ್ಷವನ್ನು ಮುನ್ನಡೆಸಬೇಕು.  ಇಡೀ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ವಾತಾವರಣ  ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ನೀವೇ ಅಧ್ಯಕ್ಷೆ ಸ್ಥಾನದಲ್ಲಿ  ಮುಂದುವರಿಯಬೇಕು. ಒಂದು ವೇಳೆ ಅನಾರೋಗ್ಯ ಕಾರಣಕ್ಕಾಗಿ ಇದು ಸಾಧ್ಯವಿಲ್ಲ ಅಂದರೆ ರಾಹುಲ್ ಗಾಂಧಿ ಅವರಿಗೆ ಈ ಜವಾಬ್ದಾರಿಯನ್ನು ನೀಡಬೇಕು ಎಂದು ಸಿದ್ಧರಾಮಯ್ಯ ಪತ್ರದಲ್ಲಿ ಮನವಿ ಮಾಡಿದ್ದಾರೆ.

Key words: Rahul Gandhi –appoint- AICC President-Former CM –Siddaramaiah-letter – Sonia Gandhi