ಇಂದು ರಾಹುಗ್ರಸ್ತ ಚಂದ್ರಗ್ರಹಣ: ಹಲವು ದೇವಾಲಯಗಳು ಬಂದ್.

ಬೆಂಗಳೂರು,ನವೆಂಬರ್,8,2022(www.justkannada.in): ಇಂಧು ರಾಹುಗ್ರಸ್ತ ಚಂದ್ರಗ್ರಹಣ ಸಂಭವಿಸಲಿದ್ದು.ಈ  ಹಿನ್ನೆಲೆಯಲ್ಲಿ ರಾಜ್ಯದ ಹಲವು ದೇಗುಲಗಳ ಬಾಗಿಲು ಮುಚ್ಚಿರಲಿದ್ದು ದೇವಸ್ಥಾನಗಳಲ್ಲಿ ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಇದು 2022 ರಲ್ಲಿ ಸಂಭವಿಸುತ್ತಿರುವ ಕಟ್ಟಕಡೆಯ ಗ್ರಹಣವಾಗಿದೆ. ಎರಡು ವಾರದ ಹಿಂದಷ್ಟೇ ಸೂರ್ಯಗ್ರಹಣ ಗೋಚರವಾಗಿತ್ತು.

ಮಧ್ಯಾಹ್ನ 2 ಗಂಟೆ 37 ನಿಮಿಷಕ್ಕೆ ಚಂದ್ರ ಗ್ರಹಣ ಆರಂಭವಾಗಲಿದ್ದು,  ಸಂಜೆ 4 ಗಂಟೆ 28 ನಿಮಿಷಕ್ಕೆ ಗ್ರಹಣ ಮಧ್ಯಕಾಲ ತಲುಪಲಿದೆ.  ಸಂಜೆ 6 ಗಂಟೆ 17 ನಿಮಿಷ ಚಂದ್ರಗ್ರಹಣ ಅಂತ್ಯವಾಗಲಿದೆ. ಕರ್ನಾಟಕದಲ್ಲಿ ಪಾರ್ಶ್ವ ಚಂದ್ರಗ್ರಹಣ ಗೋಚರ ಆಗಲಿದ್ದು, ಇದೇ ಹೊತ್ತಲ್ಲಿ ಬಹುತೇಕ ದೇವಾಲಯಗಳು ಬಂದ್​​​​ ಆಗಲಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಇಂದು ಮೈಸೂರಿನ ಚಾಮುಂಡಿಬೆಟ್ಟದ ದೇಗುಲ, ತುಮಕೂರು ಜಿಲ್ಲೆ​ ದೇವರಾಯನದುರ್ಗ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನಕ್ಕೆ ಇಂದು ಮಧ್ಯಾಹ್ನ 1 ಗಂಟೆ ಬಳಿಕ ಭಕ್ತರ ನಿಷೇಧ ಹೇರಲಾಗಿದ್ದು ಕೊರಟಗೆರೆ ತಾಲೂಕಿನ ಗೊರವನಹಳ್ಳಿಯಲ್ಲಿರುವ ಗೊರವನಹಳ್ಳಿ ಮಹಾಲಕ್ಷ್ಮೀ ದೇಗಲವು ಇಂದು ಸಂಜೆ 5ರಿಂದ ನಾಳೆ ಬೆಳಗ್ಗೆ 6.30ರವರೆಗೆ  ಬಂದ್ ಆಗಿರಲಿದೆ.

ಇಂದು ಸಂಭವಿಸುವ ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣಕ್ಕೆ ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳು ಸಾಕ್ಷಿಯಾಗಲಿವೆ.

Key words: Rahugrasta- lunar –eclipse- today-Many temples – closed.