ವಿದ್ಯುತ್ ಕದ್ದವರು ಅವರ ಬಗ್ಗೆ ಏನ್ ಪ್ರಶ್ನೆ ಕೇಳ್ತೀರಿ.? ಅವರಿಗೆ ಯಾವ ನೈತಿಕತೆವಿದೆ-ಹೆಚ್.ಡಿಕೆಗೆ ಕುಟುಕಿದ ಸಿಎಂ ಸಿದ‍್ಧರಾಮಯ್ಯ.

Promotion

ಮೈಸೂರು,ನವೆಂಬರ್,18,2023(www.justkannada.in):  ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ವಿಡಿಯೋ ವೈರಲ್ ವಿಚಾರ ಸಂಬಂಧ ವರ್ಗಾವಣೆ ದಂಧೆ ಆರೋಪ ಮಾಡಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ತಿರುಗೇಟು ನೀಡಿರುವ ಸಿಎಂ ಸಿದ್ಧರಾಮಯ್ಯ, ವಿದ್ಯುತ್ ಕದ್ದವರು ಅವರ ಬಗ್ಗೆ ಏನ್ ಪ್ರಶ್ನೆ ಕೇಳ್ತೀರಿ.? ಅವರಿಗೆ ಯಾವ ನೈತಿಕತೆವಿದೆ ಎಂದು ಲೇವಡಿ ಮಾಡಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಸಿಎಂ ಸಿದ್ಧರಾಮಯ್ಯ, ಕುಮಾರಸ್ಚಾಮಿ ಹೇಳಿದ್ದಕ್ಕೆ ಉತ್ತರ ಕೊಡಬೇಕಿಲ್ಲ. ಪೆನ್ ಡ್ರೈವ್ ವಿಚಾರದಲ್ಲಿ  ತೆಗೆದು ತೋರಿಸಲು ಹೇಳಿ. ಅಸೆಂಬ್ಲಿಯಲ್ಲಿ ಯಾಕೆ ಅವರು ತೋರಿಸಲಿಲ್ಲ. ಸಾಕಷ್ಟು ಮಂದಿ ರಿಕ್ವೆಸ್ಡ್ ಮಾಡಿದ್ದಾರೆ ಅದಕ್ಕೆ ತೋರಿಸಲಿಲ್ಲ ಅಂತಾರೆ. ಇವರು ಎಂತಹವರು ? ಅಣ್ಣಾ ಅಂದು‌ಬಿಟ್ರಾ? ಅಣ್ಣಾ ಅಂದವರು ಯಾರು ? ಅವರ ಹೆಸರು ಹೇಳಬೇಕಲ್ವ ? ಅದಕ್ಕೆ ತೋರಿಸಲಿಲ್ವಾ ಎಂದು ವ್ಯಂಗ್ಯ ವಾಡಿದರು.

ಬೇಡ ಕಣಣ್ಣಾ.. ಬೇಡ ಕಣಣ್ಣಾ ಎಂದವರು ಯಾರು? ಇವೆಲ್ಲವನ್ನೂ‌ ಅವರು ಹೇಳಬೇಕಲ್ವಾ? ವಿದ್ಯುತ್ ಕದ್ದವರು ಅವರ ಬಗ್ಗೆ ಏನ್ ಪ್ರಶ್ನೆ ಕೇಳ್ತೀರಿ.? ಅವರಿಗೆ ಯಾವ ನೈತಿಕತೆವಿದೆ. ಅವರಿಗೆ ಮಾತನಾಡಲು ಯಾವ ಹಕ್ಕಿದೆ. ದಂಡ ಕಟ್ಟಿರುವುದೇ ಅಪರಾಧ ಮಾಡಿದ್ದೇನೆ ಅಂತಲೇ. ಅಪರಾಧ ಅಂದರೆ ಅಪರಾಧವೇ ಅದು ಸಣ್ಣದೇ ಆಗಲಿ,‌ ದೊಡ್ಡದೇ ಆಗಲಿ ಎಂದು ಹೆಚ್.ಡಿಕೆಯನ್ನ ಸಿಎಂ ಸಿದ್ಧರಾಮಯ್ಯ ಕುಟಕಿದರು.

ಕೌರವ ಸಂಸ್ಕೃತಿ ರಾಜಕಾರಣ ಬೇಡ ಎಂಬ ಕುಮಾರಸ್ವಾಮಿ‌ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ, ಕುಮಾರಸ್ವಾಮಿ ಅವರು ಆರೋಪ‌ ಸಾಬೀತು ಮಾಡ್ತಾರಾ?  ಕುಮಾರಸ್ವಾಮಿ ಅವರು ಡೆಸ್ಪರೇಟ್ ಆಗಿದ್ದಾರೆ.  ಅವರಿಗೆ ಹೊಟ್ಟೆ ಉರಿ, ಹೊಟ್ಟೆ ಕಿಚ್ಚು, ಅಸೂಯೆ, ದ್ವೇಷ. ಅವರು ಕೇವಲ 19 ಸ್ಥಾನ ಗೆದ್ದರು. ಅವರ ಪಂಚರತ್ನಗಳು‌ ಏನಾದವು? 37ರಿಂದ 19 ಕ್ಕೆ ಕುಸಿತ ಕಂಡಿದ್ದರಿಂದ ಹತಾಶೆಗೊಳಗಾದರು ಎಂದು ಟೀಕಿಸಿದರು.

ವಿಪಕ್ಷ ನಾಯಕರಾಗಿ ಆರ್.ಅಶೋಕ್ ನೇಮಕ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ಧರಾಮಯ್ಯ, ಅವರು ವಿಪಕ್ಷರಾದರೆ ಅದಕ್ಕೆ ನಾನೇನು ಮಾಡಲಿ. ನಮಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ. ನಾವು ಜನರಿಗೆ ಕೊಟ್ಟಿರುವ ಆಶ್ವಾಶನೆಗಳಿವೆ. ನಮ್ಮ ಉದ್ದೇಶ ರಾಜ್ಯದಲ್ಲಿ ಶಾಂತಿಯ ವಾತಾವರಣ ನಿರ್ಮಾಣವಾಗಬೇಕು. ದ್ವೇಷದ ರಾಜಕಾರಣ ನಿಲ್ಲಬೇಕು. ನಾವು ಎಲ್ಲಾ ಆಶ್ವಾಸನೆಗಳನ್ನ ಈಡೇರಿಸಬೇಕು. ಅವರು ಯಾರನ್ನಾದರೂ ಮಾಡಲಿ ನಮಗೂ ಅದಕ್ಕೂ ಸಂಬಂಧವಿಲ್ಲ ಎಂದರು.

ರಾಜ್ಯದಲ್ಲಿ ಟ್ರಾನ್ಸ್‌ಫರ್ ದಂಧೆ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅವರು ಹೇಳಿದ್ದನ್ನೆಲ್ಲ‌ ನಾವು ಕೇಳಬೇಕೆಂಬುದಲ್ಲ. ಅಸೆಂಬ್ಲಿಯಲ್ಲಿ ಇದಕ್ಕೆಲ್ಲ ಉತ್ತರ ನೀಡಬೇಕು. ಅಲ್ಲಿಯೇ ಅವರಿಗೆ ಉತ್ತರ ನೀಡ್ತೀವಿ. ವಿಡಿಯೋದಲ್ಲಿ ಮಾತನಾಡಿರುವ ವಿವೇಕಾನಂದ ಬಗ್ಗೆ ಗೊತ್ತಾ? ವಿವೇಕಾನಂದ ಮೈಸೂರು ತಾಲೂಕು‌ ಬಿಇಒ.  ಬಿಇಒ ವಿವೇಕಾನಂದರ ಬಗ್ಗೆ ವಿಡಿಯೋದಲ್ಲಿ ಮಾತನಾಡಿರುವುದು. ಇನ್ಸ್ ಪೆಕ್ಟರ್ ವಿವೇಕಾನಂದ ಟ್ರಾನ್ಸ್ ಫರ್ ಆಗಿರುವುದು ಚಾಮರಾಜ ಕ್ಷೇತ್ರಕ್ಕೆ ಎಂದು ಸ್ಪಷ್ಟನೆ ನೀಡಿದರು.

ಚಿಕ್ಕಮಗಳೂರಲ್ಲಿ ಕಾಂಗ್ರೆಸ್ ವಿರುದ್ಧ ಪೋಸ್ಟರ್ ಚಳವಳಿ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ,, ಜನ ಈಗಾಗಲೇ ಅವರಿಗೆ ಪಾಠ ಕಲಿಸಿದ್ದಾರೆ. ವಿಪಕ್ಷ‌ ಸ್ಥಾನದಲ್ಲಿ ಕೂತುಕೊಳ್ಳಿ ಅಂತ ಕೂರಿಸಿಸ್ದಾರೆ. ಬಿಜೆಪಿ, ಜೆಡಿಎಸ್ ಅಧಿಕಾರಕ್ಕೆ ಬಂದೇ ಬರ್ತೀವಿ ಅಂತಿದ್ರು. ಸಮ್ಮಿಶ್ರ ಸರ್ಕಾರ ನಡೆಸಲು ಚಿಂತನೆಯಲ್ಲಿದ್ದರು. ಸದ್ಯ ಅಧಿಕಾರಕ್ಕೆ ಬರದೇ ಇರುವುದಕ್ಕೆ ಡೆಸ್ಪರೇಟ್ ಆಗಿದ್ದಾರೆ ಎಂದರು.

ಈಗ ಚುನಾವಣೆ ನಡೆದರೂ ಬಿಜೆಪಿ ಗೆಲ್ಲುತ್ತೆ ಎಂಬ ಬಿಎಸ್ ವೈ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಜನರು ತೀರ್ಮಾನ ನೀಡುತ್ತಾರೆ. ಬಿಜೆಪಿಯವರು ಕನಸು ಕಾಣ್ತಾ ಇದ್ದಾರೆ. ರಮೇಶ್ ಜಾರಕಿಹೊಳಿ, ಯತ್ನಾಳ್ , ಬೆಲ್ಲದ್ ಏಕೆ ಎದ್ದು ಹೋದರು? ಮಗನನ್ನು ರಾಜ್ಯಾಧ್ಯಕ್ಷ ಮಾಡಿದ್ದು, ಅಶೋಕನನ್ನು ವಿಪಕ್ಷ ನಾಯಕನನ್ನಾಗಿ ಮಾಡಿದ್ದು. ಮುಂದಿನ ದಿನಗಳಲ್ಲಿ ಬಿಜೆಪಿಯಲ್ಲಿ ಅಸಮಾಧಾನ ಉಂಟಾಗಲಿದೆ. ಬಿಜೆಪಿಯ ಪರಿಸ್ಥಿತಿ ಏನಾಗಲಿದೆ  ಎಂಬುದನ್ನು ಕಾದು‌ನೋಡಿ‌. ಸ್ವಲ್ಪದಿನ ಕಾದು ನೋಡಿ ಎನ್ನುತ್ತ ನಗೆಬೀರಿದರು.

Key words: question – about those – stole -electricity? – HDK- CM Siddaramaiah