ಪಿ.ವಿ.ಸಿಂಧು ಅವರ ಭಯೋಪಿಕ್’ಗೆ ಬಾಲಿವುಡ್’ ರೆಡಿ ! ಗೋಪಿಚಂದ್ ಪಾತ್ರಕ್ಕೆ ಅಕ್ಷಯ್ ಕುಮಾರ್ ?

Promotion

ಬೆಂಗಳೂರು, ಆಗಸ್ಟ್ 28, 2019 (www.justkannada.in): ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್ ಷಿಪ್ ನಲ್ಲಿ ಚಿನ್ನ ಗೆದ್ದ ಪಿ.ವಿ.ಸಿಂಧು ಅವರ ಭಯೋಪಿಕ್ ಗೆ ಬಾಲಿವುಡ್ ನಲ್ಲಿ ಸಿದ್ಧತೆಗಳು ನಡೆಯುತ್ತಿವೆ.

ಸಿಂಧು ಕೋಚ್ ಪುಲ್ಲೇಲ ಗೋಪಿಚಂದ್ ಪಾತ್ರದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟಿಸಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾತನಾಡಿರುವ ಗೋಪಿಚಂದ್, ನನಗೆ ಅಕ್ಷಯ್ ಕುಮಾರ್ ಎಂದರೆ ಇಷ್ಟ. ನಿಜವಾಗಿಯೂ ಅವರು ನನ್ನ ಪಾತ್ರ ಪೋಷಿಸಿದರೆ ಅದ್ಭುತವಾಗಿರುತ್ತದೆ ಎಂದಿದ್ದಾರೆ.

ಯಾಕೆಂದರೆ ನಾನು ಇಷ್ಟ ಪಡುವ ವ್ಯಕ್ತಿಗಳಲ್ಲಿ ಅವರೂ ಒಬ್ಬರು. ಆದರೆ ಬಯೋಪಿಕ್ ಬಗ್ಗೆ ನನಗೆ ಸ್ಪಷ್ಟನೆ ಇಲ್ಲ ಎಂದಿದ್ದಾರೆ. ಗೋಪಿಚಂದ್ ಅವರು ಭಾರತ ಬ್ಯಾಡ್ಮಿಂಟನ್ ತಂಡಕ್ಕೆ ರಾಷ್ಟ್ರೀಯ ಕೋಚ್ ಆಗಿದ್ದಾರೆ.