ಝೀರೋ ಟ್ರಾಫಿಕ್ ಬೇಡ: ನಾನು ಸರಳವಾಗಿ ಜನರ ಮಧ್ಯೆ ಓಡಾಡ್ತೀನಿ- ಡಿಸಿಎಂ ಅಶ್ವಥ್ ನಾರಾಯಣ್ ಹೇಳಿಕೆ…

ಬೆಂಗಳೂರು,ಆ,28,2019(www.justkannada.in): ರಾಜ್ಯ ಬಿಜೆಪಿ ಸರ್ಕಾರದಲ್ಲಿ ಮೂರು ಜನ ಡಿಸಿಎಂ ಆಗಿರುವ ಹಿನ್ನೆಲೆ ಝೀರೋ ಟ್ರಾಫಿಕ್ ನಿಂದಾಗಿ ವಾಹನ ಸವಾರರಿಗೆ ಕಿರಿಕಿರಿಯಾಗುವ ಸಂಭವವಿದೆ. ಈ ನಡುವೆ ಡಿಸಿಎಂ ಅಶ್ವಥ್ ನಾರಾಯಣ್ ಝೀರೋ ಟ್ರಾಫಿಕ್ ಬಳಸದಿರಲು ನಿರ್ಧರಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಅಶ್ವಥ್ ನಾರಾಯಣ್, ನನ್ನಿಂದ ಜನತೆಗೆ ಅನಾನುಕೂಲ ಆಗಬಾರದು. ಹಾಗಾಗಿ ಝೀರೋ ಟ್ರಾಫಿಕ್ ಬೇಡ ಅಂದಿದ್ದೀನಿ. ನಾನು ಸರಳವಾಗಿ ಜನರ ಮಧ್ಯೆ ಓಡಾಡ್ತೀನಿ ಎಂದು ಹೇಳಿದ್ದಾರೆ.

ಇಂದು ಡಾಲರ್ಸ್ ಕಾಲೋನಿಯಲ್ಲಿರುವ  ಸಿಎಂ ಬಿಎಸ್ ಯಡಿಯೂರಪ್ಪ  ಅವರ ನಿವಾಸಕ್ಕೆ ಡಿಸಿಎಂ ಅಶ್ವಥ್ ನಾರಾಯಣ್ ಭೇಟಿ ನೀಡಿದರು.  ಬಳಿಕ ಮಾತನಾಡಿದ ಅವರು,  ಇಂದಿರಾ ಕ್ಯಾಂಟೀನ್ ಮುಚ್ಚುವ ವಿಚಾರ ಸಂಬಂಧ ಇಂದಿರಾ ಕ್ಯಾಂಟೀನ್ ನ ಅವ್ಯವಹಾರಗಳ ಬಗ್ಗೆ ಮಾಧ್ಯಮಗಳಲ್ಲಿ ಬೆಳಕಿಗೆ ಬಂದಿವೆ. ಕ್ಯಾಂಟೀನಿನಲ್ಲಿ ನಡೀತಿರುವ ಅಕ್ರಮ, ಆಹಾರದ ಗುಣಮಟ್ಟದ ಬಗ್ಗೆ ವಿಚಾರಣೆ ಮಾಡಲಾಗ್ತಿದೆ. ಇಂದಿರಾ ಕ್ಯಾಂಟೀನ್ ಮುಚ್ಚುವ ಪ್ರಸ್ತಾಪ, ಪ್ರಯತ್ನ ಇಲ್ಲ. ಇಂದಿರಾ ಕ್ಯಾಂಟೀನ್ ಮುಚ್ಚುವ ದುರುದ್ಧೇಶ ಇಲ್ಲ. ಇಂದಿರಾ ಕ್ಯಾಂಟೀನ್ ನ ಅವ್ಯವಸ್ಥೆ ಸರಿಪಡಿಸ್ತೇವೆ ಅಷ್ಟೇ ಎಂದು ಹೇಳಿದರು.

Key words: No Zero Traffic-simply –travelling-people-DCM -Ashwath Narayan