ಬಿಎಸ್ ವೈರನ್ನ ಕೆಳಗಿಳಿಸಿ ಬೇರೊಬ್ಬ ಲಿಂಗಾಯತರಿಗೆ ಸಿಎಂ ಸ್ಥಾನ ನೀಡಲಿ- ಬಸವ ಮೃತ್ಯುಂಜಯ ಸ್ವಾಮೀಜಿ ಆಗ್ರಹ..

Promotion

ಚಿತ್ರದುರ್ಗ,ಫೆಬ್ರವರಿ,5,2021(www.justkannada.in):   ಮೀಸಲಾತಿ ಬಗ್ಗೆ ಹೈಕಮಾಂಡ್ ತೀರ್ಮಾನವೇ ಅಂತಿಮ. ಈ ಬಗ್ಗೆ ನಾನು ನಿರ್ಧಾರ ಕೈಗೊಳ್ಳಲು ಆಗುವುದಿಲ್ಲ ಎಂದು ಹೇಳಿಕೆ ನೀಡಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಬಸವ ಮೃತ್ಯುಂಜಯ ಶ್ರೀಗಳು ಗರಂ ಆಗಿದ್ದಾರೆ.jk

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಶ್ರೀ ಬಸವ ಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದೆ. ಚಿತ್ರದುರ್ಗದಲ್ಲಿ ಇಂದು ಮಾತನಾಡಿ ಸಿಎಂ ಬಿಎಸ್ ವೈ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಶ್ರೀ ಬಸವ ಮೃತ್ಯುಂಜಯ ಸ್ವಾಮೀಜಿ, ಸಿಎಂ ಬಿಎಸ್ ವೈಗೆ ಬುದ್ಧಿ ಸ್ಥಿಮಿತದಲ್ಲಿಲ್ಲ. ಅವರಿಗೆ ವಯಸ್ಸಾಗಿದೆ. ಬಿಎಸ್ ವೈರನ್ನ ಕೆಳಗಿಳಿಸಿ ಬೇರೊಬ್ಬ ಲಿಂಗಾಯಿತರಿಗೆ ಸಿಎಂ ಸ್ಥಾನ ನೀಡಲಿ ಎಂದು ಆಗ್ರಹಿಸಿದ್ಧಾರೆ.Put down- BS yeddyurappa-give -CM -another –lingayt- Basava Mritunjaya Swamiji

ನಿನ್ನೆ ಸಚಿವರ ನಿಯೋಗ ಬಂದ ವೇಳೆ ಭರವಸೆ ನೀಡಿದ್ದರು. ಈಗ ಕೇಂದ್ರದತ್ತ ಬೆರಳು ತೋರಿಸಿ ಬಿಜೆಪಿ ಹೈಕಮಾಂಡ್ ವಿರುದ್ಧ ಎತ್ತುಕಟ್ಟುವ ಕೆಲಸ ಮಾಡುತ್ತಿದ್ದಾರೆ. ಕೇಂದ್ರದ ವರಿಷ್ಠರು ಬಿಎಸ್ ಯಡಿಯೂರಪ್ಪ ಅವರನ್ನ ಪದಚ್ಯುತಗೊಳಿಸಲಿ. ಸಿಎಂ ಸ್ಥಾನದಿಂದ ಕೆಳಗಿಳಿಸಿ ಬೇರೆ ಸಮರ್ಥ ಲಿಂಗಾಯಿತರಿಗೆ ಸಿಎಂ ಸ್ಥಾನ ನೀಡಲಿ ಎಂದು ಒತ್ತಾಯಿಸಿದ್ದಾರೆ.

Key words: Put down- BS yeddyurappa-give -CM -another –lingayt- Basava Mritunjaya Swamiji