ಭಾರತ-ಇಂಗ್ಲೆಂಡ್ ಫಸ್ಟ್ ಟೆಸ್ಟ್: ಜೋ ರೂಟ್ ಭರ್ಜರಿ ಶತಕ, ವಿಕೆಟ್ ಗೆ ಟೀಂ ಇಂಡಿಯಾ ಬೌಲರ್’ಗಳ ಪರದಾಟ

ಚೆನ್ನೈ, ಫೆ.05, 2020 (www.justkannada.in)ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ಉತ್ತಮ ಆರಂಭ ಪಡೆದಿದೆ.

ಆರಂಭದಲ್ಲೇ ಇಂಗ್ಲೆಂಡ್​ ತಂಡದ ನಾಯಕ ಜೋ ರೂಟ್ ಶತಕ ಪೂರೈಸಿದ್ದಾರೆ. ಶಹಬಾಜ್ ನದೀಮ್ ಅವರ 59 ನೇ ಓವರ್‌ನ ಕೊನೆಯ ಎಸೆತದಲ್ಲಿ ನಾಲ್ಕು ರನ್ ಗಳಿಸುವ ಮೂಲಕ 50 ರನ್​ ಪೂರೈಸಿದ ರೂಟ್ ಮೊದಲ ದಿನವೇ ಶತಕವನ್ನೂ ಪೂರೈಸಿದರು.

ಮೊದಲನೇ ಸೆಷನ್​ನಲ್ಲಿ ಯಶಸ್ಸು ಗಳಿಸಿದ್ದ ಟೀಂ ಇಂಡಿಯಾ ವೇಗಿಗಳು 2ನೇ ಸೆಷನ್​ನಲ್ಲಿ ವಿಕೆಟ್​ ತೆಗೆಯಲು ಪರದಾಡಿದರು.

ಈಗಾಗಲೇ 2ನೇ ಸೆಷನ್​ನಲ್ಲಿ ಉತ್ತಮ ಜೊತೆಯಾಟ ಆಡಿರುವ ಈ ಜೋಡಿ 3ನೇ ಸೆಷನ್​ನಲ್ಲೂ ತಮ್ಮ ಆಟ ಮುಂದುವರೆಸಿದೆ.