ಕಮಿಷನ್ ಆಸೆಗೆ ಹೆಚ್ಚುವರಿ ವಿದ್ಯುತ್ ಖರೀದಿ –ರಾಜ್ಯ ಸರ್ಕಾರದ ವಿರುದ್ದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಗಂಭೀರ ಆರೋಪ ..

kannada t-shirts

ಮೈಸೂರು, ನವೆಂಬರ್,24,2020(www.justkannada.in): ರಾಜ್ಯದಲ್ಲಿ ಬೇಡಿಕೆಗಿಂತ ಹೆಚ್ಚಿನ ವಿದ್ಯುತ್ ಲಭ್ಯವಿದೆ. ಆದರೂ ಕೇಂದ್ರದಿಂದ ಹಾಗೂ ಇತರೆ ರಾಜ್ಯಗಳಿಂದ ಹೆಚ್ಚುವರಿ ವಿದ್ಯುತ್ ಖರೀದಿ ಮಾಡಲಾಗುತ್ತಿದೆ. ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ 15 ಸಾವಿರ ಕೋಟಿ ನಷ್ಟವಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.I didn't knew CM BSY will think so cheaply - KPCC President D.K. Shivakumar

ನಗರದ ಇಂದಿರಾಗಾಂಧಿ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ  ರಾಜ್ಯ ಸರ್ಕಾರದ ಹೆಚ್ಚುವರಿ ವಿದ್ಯುತ್ ಖರೀದಿ ನಿರ್ಧಾರ ವಿರುದ್ಧ ಕಿಡಿಕಾರಿದ ಎಂ. ಲಕ್ಷ್ಮಣ್ , ರಾಜ್ಯದಲ್ಲಿ ಬೇಡಿಕೆಗಿಂತ ಹೆಚ್ಚಿನ ವಿದ್ಯುತ್ ಲಭ್ಯವಿದೆ. ಹೆಚ್ಚುವರಿ ವಿದ್ಯುತ್ ಲಭ್ಯವಿದ್ದರೂ ಕೇಂದ್ರದಿಂದ ಹಾಗೂ ಇತರೆ ರಾಜ್ಯಗಳಿಂದ ಹೆಚ್ಚುವರಿ ವಿದ್ಯುತ್ ಖರೀದಿ ಮಾಡಲಾಗುತ್ತಿದೆ. ಕಮಿಷನ್ ಆಸೆಗೆ ಈ ರೀತಿ ವಿದ್ಯುತ್ ಖರೀದಿ ಮಾಡಲಾಗುತ್ತಿದೆ ಎಂದು ಹರಿಹಾಯ್ದರು.

ಕಳೆದ 15 ತಿಂಗಳಿನಿಂದಲೂ ಸರ್ಕಾರ ಈ ರೀತಿ ವಿದ್ಯುತ್ ಖರೀದಿ ಮಾಡುತ್ತಿದೆ. ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ 15 ಸಾವಿರ ಕೋಟಿ ನಷ್ಟವಾಗಿದೆ. ಹೀಗಾಗಿ ಕೂಡಲೇ ವಿದ್ಯುತ್ ಖರೀದಿಯನ್ನು ನಿಲ್ಲಿಸಿ. ನಮ್ಮಲ್ಲೇ ಲಭ್ಯವಿರುವ ವಿದ್ಯುತ್ ಅನ್ನು ಬಳಸಿಕೊಳ್ಳಿ. ಅಗತ್ಯಕ್ಕಿಂತ ಹೆಚ್ಚಿನ ಹಣವನ್ನು ತೆತ್ತು ವಿದ್ಯುತ್ ಖರೀದಿಸುವ ಅಗತ್ಯವಾದರೂ ಏನಿತ್ತು..? ಕಮಿಷನ್ ಗಾಗಿ ರಾಜ್ಯವನ್ನೇ ಮಾರಿಕೊಳ್ಳುತ್ತಿದ್ದೀರಾ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಗುಡುಗಿದರು.

English summary…

KPCC Spokesperson M. Lakshman alleges State Govt. of purchasing extra power to get commission
Mysuru, Nov. 24, 2020 (www.justkannada.in): KPCC spokesperson K. Lakshman today alleged that the State Government has purchased additional power from other states with an intention of gaining personal commission, causing a massive loss of Rs. 15,000 crore to the state exchequer.
Speaking to the press persons at a press meet held at the Indira Gandhi Congress Bhavana in Mysuru today he criticized the State Government for involving in corrupt practices. “There is more supply than demand for power in the state as of now. Even though the government is purchasing additional power from other states for want of commission,” he said.
Further he alleged that the government has been purchasing power like this from the last 15 months, causing a huge loss of Rs.15,000 crore to the state exchequer.purchase-additional-electricity-ommission-kpcc-spokesperson-m-laxman-mysore
Keywords: Rs.15,000 crore loss-extra power purchase-KPCC-K. Lakshman-State Government-corruption

Key words: Purchase- additional -electricity –ommission-KPCC spokesperson -M .Laxman -mysore

website developers in mysore