ಜೇಮ್ಸ್ ಚಿತ್ರದಲ್ಲಿ ಹೊಸ ಲುಕ್ ಗಾಗಿ ಶೂಟಿಂಗ್ ನಿಂದ ಬ್ರೇಕ್ ಪಡೆದ ಅಪ್ಪು

Promotion

ಬೆಂಗಳೂರು, ಅಕ್ಟೋಬರ್ 19, 2021 (www.justkannada.in): ಜೇಮ್ಸ್ ಚಿತ್ರದ ಹಾಡೊಂದರಲ್ಲಿ ಪುನೀತ್ ಸ್ಟೈಲಿಶ್ ಆಗಿ ಗಡ್ಡ, ಮೀಸೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಹೌದು. ಚೇತನ್ ಕುಮಾರ್ ನಿರ್ದೇಶನದ ಜೇಮ್ಸ್ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ.

ಇದೀಗ ಹಾಡುಗಳ ಚಿತ್ರೀಕರಣಕ್ಕಾಗಿ ಅಪ್ಪು ಕೆಲ ದಿನ ಬ್ರೇಕ್ ಪಡೆಯಲಿದ್ದಾರೆ. ಹಾಡಿನ ಶೂಟಿಂಗ್ ಬೇಕಾದಂತೆ ಗಡ್ಡ, ಮೀಸ್ ಬೆಳೆಸಿಕೊಳ್ಳಲು ಅಪ್ಪು ಸದ್ಯಕ್ಕೆ ಬ್ರೇಕ್ ಪಡೆಯಲಿದ್ದಾರೆ.

ಜೇಮ್ಸ್ ಚಿತ್ರದ ಹಾಡೊಂದರಲ್ಲಿ ಪುನೀತ್ ಸ್ಟೈಲಿಶ್ ಆಗಿ ಗಡ್ಡ, ಮೀಸೆ ಬಿಟ್ಟುಕೊಂಡು ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಫ್ಯಾನ್ಸ್ ಗೆ ಅಪ್ಪು ಹೊಸ ಲುಕ್ ನಲ್ಲಿ ಕಾಣಿಸಿಕೊಂಡು ಖುಷಿ ಕೊಡಲಿದ್ದಾರೆ.