‘ಯುವರತ್ನ’ ನೋಡಲು ಅಡ್ವಾನ್ಸ್ ಟಿಕೆಟ್ ಬುಕ್ ಮಾಡುತ್ತಿರುವ ಅಪ್ಪು ಫ್ಯಾನ್ಸ್

Promotion

ಬೆಂಗಳೂರು, ಮಾರ್ಚ್ 30, 2021 (www.justkannada.in): ‘ಯುವರತ್ನ’ ಸಿನಿಮಾ ಏಪ್ರಿಲ್​ 1ರಂದು ಬಿಡುಗಡೆಗೆ ಸಜ್ಜಾಗಿದೆ. ಇದಕ್ಕಾಗಿ ಮುಂಗಡ ಬುಕ್ಕಿಂಗ್ ಕೂಡ ಶುರುವಾಗಿದೆ.

ಹೌದು. ಬಹುನಿರೀಕ್ಷಿತ ಪವರ್​ಸ್ಟಾರ್​ ಪುನೀತ್ ರಾಜ್​ಕುಮಾರ್​ ಅಭಿನಯದ ‘ಯುವರತ್ನ’ ಏಪ್ರಿಲ್​ 1ರಂದು ಥಿಯೇಟರ್ ಗೆ ಬರಲಿದೆ. ಇದಕ್ಕಾಗಿ ಚಿತ್ರತಂಡ ಅಡ್ವಾನ್ಸ್ ಬುಕ್ಕಿಂಗ್ ಅನ್ನು ಶುರು ಮಾಡಿದೆ.

ಬೆಂಗಳೂರಿನ ಊರ್ವಶಿ, ವೀರೇಶ್ ಸೇರಿದಂತೆ ಮುಂತಾದ ಚಿತ್ರಮಂದಿರಗಳಲ್ಲಿ ಬುಕ್ಕಿಂಗ್ ಪ್ರಾರಂಭವಾಗಿದೆ. ಅಪ್ಪು ಅಭಿಮಾನಿಗಳು ಮುಂಜಾನೆಯಿಂದಲೇ ಕಾದು-ಕಾದು ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಅಂದಹಾಗೆ ಈ ಹಿಂದೆ ರಾಬರ್ಟ್ ಮತ್ತು ಪೊಗರು ಚಿತ್ರಗಳ ಬಿಡುಗಡೆಗೂ ಕೆಲವು ದಿನಗಳ ಮುಂಚೆಯೇ ಅಡ್ವಾನ್ಸ್ ಬುಕ್ಕಿಂಗ್ ಪ್ರಾರಂಭಿಸಲಾಗಿತ್ತು. ‘ಯುವರತ್ನ’ ಚಿತ್ರವು ಕರ್ನಾಟಕ, ಆಂಧ್ರ, ತೆಲಂಗಾಣ ಸೇರಿದಂತೆ ಹೊರದೇಶಗಳಲ್ಲೂ ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.