ಕೊರೋನಾ ತಡೆಗಾಗಿ ಸಾರ್ವಜನಿಕರು ಸಹಕರಿಸಬೇಕು- ಮೈಸೂರು ಡಿಸಿ ರೋಹಿಣಿ ಸಿಂಧೂರಿ…

Promotion

ಮೈಸೂರು,ಮಾರ್ಚ್,19,2021(www.justkannada.in): ಈಗಾಗಲೇ  ಮಹಾರಾಷ್ಟ್ರದಲ್ಲಿ ಕೊರೊ‌ನಾ 2ನೇ ಅಲೆ ಬಂದಿರುವುದನ್ನು ಘೋಷಿಸಲಾಗಿದೆ. ನಮ್ಮ ರಾಜ್ಯದಲ್ಲೂ ಕೊರೊ‌ನಾ 2ನೇ ಅಲೆಯ ಆತಂಕ ಎದುರಾಗಿದೆ. ಕೊರೊನಾ ತಡೆಗಾಗಿ ಜನರು ಸಹಕರಿಸಬೇಕು  ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮನವಿ ಮಾಡಿದರು.jk

ಕೊರೋನಾ ಹೆಚ್ಚಳ ಕುರಿತು ಮಾತನಾಡಿದ ಮೈಸೂರು ಡಿಸಿ ರೋಹಿಣಿ ಸಿಂಧೂರಿ,  ಕಳೆದ ಬಾರಿಯಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೊರೊನಾ ತಡೆಗಾಗಿ ಜನರು ಸಹಕರಿಸಬೇಕು. ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಆರ್.ಟಿ.ಪಿ.ಸಿ.ಆರ್ ಟೆಸ್ಟ್ ಮಾಡಿಸಿಕೊಳ್ಳಬೇಕು, ಕೊರೊನಾ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.public -cooperate - corona –control- Mysore DC -Rohini Sindhuri.

ಕೊರೋನಾ ತಡೆ ವ್ಯಾಕ್ಸಿನ್ ಹಾಕಿಸಿಕೊಂಡಿದ್ದೇವೆಂದು ನಿರ್ಲಕ್ಷ್ಯ ಮಾಡಬಾರದು. ಕೊರೋನಾ ವ್ಯಾಕ್ಸಿನ್ ಹಾಕಿಸಿಕೊಂಡರೇ ಕೊರೋನಾ ಸೋಂಕು ತಗುಲುವುದಿಲ್ಲ ಎಂದು ಭಾವಿಸಬಾರದು. ವ್ಯಾಕ್ಸಿನ್ ಹಾಕಿಸಿಕೊಂಡರೇ ಸೋಂಕಿನಿಂದ ಬಾಧಿತವಾಗುವುದು ಕಡಿಮೆಯಾಗಲಿದೆ ಎಂದು ಡಿಸಿ ರೋಹಿಣಿ ಸಿಂಧೂರಿ ಹೇಳಿದರು.

Key words:  public -cooperate – corona –control- Mysore DC -Rohini Sindhuri.