ಕೌಶಲ್ಯಗಳ ಕೊರತೆ: ನಿರುದ್ಯೋಗಿಗಳಾಗುತ್ತಿರುವ ಪದವೀಧರರು – ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ 

ಮೈಸೂರು,ಮಾರ್ಚ್,19,2021(www.justkannada.in) : ಉದ್ಯೋಗಕ್ಕೆ ಕೊರತೆಯಿಲ್ಲ. ಆದರೆ, ಕೌಶಲ್ಯಗಳ ಕೊರತೆಯಿಂದಾಗಿ ಪದವಿ, ಸ್ನಾತಕೋತ್ತರ ಪದವಿ ಪಡೆದವರು ನಿರುದ್ಯೋಗಿಗಳಾಗಿದ್ದಾರೆ. ಹೀಗಾಗಿ, ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಉದ್ಯೋಗಕ್ಕೆ ಸಹಕಾರಿಯಾಗುವಂತೆ ಕೌಶಲಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ವಿವಿಯು ಕೆರಿಯರ್ ಹಬ್ ಕಾರ್ಯಕ್ರಮ ರೂಪಿಸಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಸಲಹೆ ನೀಡಿದರು.  lack-skills-Bachelor's-Master's Degree-Unemployed-Chancellor- Prof.G Hemant Kumar ಮಾನಸಗಂಗೋತ್ರಿಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಸಿಪಿಡಿಪಿಎಸ್, ಕೆರಿಯರ್ ಹಬ್, ಅಖಿಲ ಭಾರತೀಯ ಸಂಶೋಧಕರ ಸಂಘದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ “ಕೌಶಲ್ಯ ಅಭಿವೃದ್ಧಿ ತರಬೇತಿ ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರವೇ ಎಲ್ಲರಿಗೂ ಕೆಲಸ ಕೊಡುವುದಕ್ಕೆ ಸಾಧ್ಯವಿಲ್ಲ. ಪದವಿ, ಸ್ನಾತಕೋತ್ತರ ಪದವಿಯೊಂದಿಗೆ ಕೌಶಲ್ಯಗಳನ್ನು ಕಲಿತು ಉದ್ಯೋಗಸೃಷ್ಟಿಸಿಕೊಂಡು, ಬದುಕು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿವಿಯ ಕಲಾ, ವಿಜ್ಞಾನ, ವಾಣಿಜ್ಯ ವಿಭಾಗಗಳ ಎಲ್ಲಾ ವಿದ್ಯಾರ್ಥಿಗಳಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಆಯಾ ವಿಭಾಗದವರಿಗೆ ಅವಶ್ಯಕತೆಯಿರುವಂತಹ ಕೌಶಲ್ಯಗಳನ್ನು ಕಲಿಸಿಕೊಡುವುದಕ್ಕೆ ಪ್ರಯತ್ನಿಸಲಾಗುವುದು. ವಿದ್ಯಾರ್ಥಿಗಳು ಇದಕ್ಕೆ ಸಹಕಾರ ನೀಡುವ ಮೂಲಕ ಬದುಕು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ ಮಾತನಾಡಿ, ವಿದ್ಯಾರ್ಥಿಗಳು ಬದಲಾದ ಕಾಲಘಟ್ಟದಲ್ಲಿ ಅಗತ್ಯ ಕೌಶಲ್ಯಗಳನ್ನು ಕಲಿತು ಉದ್ಯೋಗ ಸೃಷ್ಠಿಸಿಕೊಳ್ಳದೇ, ವ್ಯವಸ್ಥೆ ಅಥವಾ ವಿವಿಯನ್ನು ದೂರುವುದು ಸರಿಯಲ್ಲ. ಸಿಗುವ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಮುಂದೆ ಬರಬೇಕು ಎಂದು ಹೇಳಿದರು.

ಕರ್ನಾಟಕ ಕೌಶಲ್ಯ ತರಬೇತಿ ಪ್ರಾಧಿಕಾರದ‌ ಪ್ರಾದೇಶಿಕ ಸಮನ್ವಯ ಅಧಿಕಾರಿ ಕೆ.ಎಸ್.ಮಂಜುನಾಥ್ ಮಾತನಾಡಿ, ಪ್ರಸ್ತುತ ಉದ್ಯೋಗಪಡೆದುಕೊಳ್ಳುವುದಕ್ಕೆ ಜ್ಞಾನದ ಜೊತೆಗೆ ಕೌಶಲ್ಯಗಳು ಬಹಳ ಮುಖ್ಯ. ಶಿಕ್ಷಣ ಎನ್ನುವುದು ಅಸ್ತ್ರವಾಗಿದ್ದು, ಅದನ್ನು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದು ಮುಖ್ಯ ಎಂದರು.

ನಿಮ್ಮ ಏಳಿಗೆಗೆ ನೀವೆ ಶಿಲ್ಪಿಗಳು ಎಂಬ ಮಾತಿನಂತೆ ನಮ್ಮ ಏಳಿಗೆಗಾಗಿ ಪ್ರಮಾಣಿಕವಾಗಿ ಶ್ರಮಿಸಬೇಕು. ದೇಶದಲ್ಲಿ ಸಾವಿರಕ್ಕೂ ಹೆಚ್ಚು ವಿವಿಗಳಿದ್ದು, ಪ್ರತಿವರ್ಷ ಕೋಟ್ಯಾಂತರ ಮಂದಿ ಪದವಿ, ಸ್ನಾತಕೋತ್ತರ ಪದವಿ ಪಡೆದುಕೊಳ್ಳುತ್ತಾರೆ. ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಗತ್ಯವಿರುವ ಕೌಶಲ್ಯಗಳನ್ನು ಕಲಿತು ಉದ್ಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

lack-skills-Bachelor's-Master's Degree-Unemployed-Chancellor- Prof.G Hemant Kumar 

ಕಾರ್ಯಕ್ರಮದಲ್ಲಿ ಕುವೆಂಪು ವಿವಿ ವಿಶ್ರಾಂತ ಕುಲಪತಿ ಪ್ರೊ.ಪಿ.ವೆಂಕಟರಾಮಯ್ಯ,  ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಎಂ.ಜಿ.ಮಂಜುನಾಥ್, ಅಖಿಲ ಭಾರತೀಯ ಸಂಶೋಧಕರ ಸಂಘದ ಅಧ್ಯಕ್ಷ ಡಾ.ಕುಶಾಲ್ ಬರಗೂರು ಇತರರು ಉಪಸ್ಥಿತರಿದ್ದರು.

ENGLISH SUMMARY….

Graduates are becoming unemployed because of lack of skills: Prof. G. Hemanth Kumar
Mysuru, Mar. 19, 2021 (www.justkannada.in): “There is no dearth of jobs. But today graduates and postgraduates have become unemployed because of a lack of skills. To fill this gap the University of Mysore has come up with the Career Hub program which equips students with employment skills,” opined Prof. G. Hemanth Kumar, Vice-Chancellor, University of Mysore.Mysore VV,Geological,Survey,Center,country's,prestigious,study,center,Chancellor,Prof.G.Hemant Kumar
He inaugurated the ‘Skill Development Training’ program organized jointly by the CPDPS, Career Hub, and the All India Researchers’ Association, held at the B.M. Sri auditorium in Manasagangotri campus today.
“Government cannot provide jobs to all. Graduates and post-graduates should inculcate skills that are required to get a job and shape their future. Efforts will be made to equip the students with the required skills in all the departments including Arts, Science, and Commerce,” he observed.
Prof. R. Shivappa, Registrar, University of Mysore said, “it is not correct to blame the system or the University without cultivating the required skills as per the changing world. You should try to utilize the available opportunities and come forward in life.”
Prof. P. Venkataramaiah, former Vice-Chancellor, Kuvempu University, M.G. Manjunath, Director, Kannada Research Centre, and Dr. Kushal Baraguru, President, All India Researchers’ Association were present on the occasion.
Keywords: University of Mysore/ Prof. G. Hemanth Kumar/ Vice-Chancellor/ Graduates/ unemployed/ lack of skills

key words : lack-skills-Bachelor’s-Master’s Degree-Unemployed-Chancellor- Prof.G Hemant Kumar