ಪಿಎಸ್ ಐ ಹಗರಣದಲ್ಲಿ ಬಂಧಿತ ಆರೋಪಿಯ ಅಣ್ಣ ಆತ್ಮಹತ್ಯೆಗೆ ಶರಣು.

Promotion

ಹಾಸನ,ಮೇ,11,2022(www.justkannada.in): ಪಿಎಸ್ ಐ ನೇಮಕಾತಿ ಅಕ್ರಮ ಹಗರಣದಲ್ಲಿ ಬಂಧಿತ ಆರೋಪಿಯ ಅಣ್ಣ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಹಾಸನ ಜಿಲ್ಲೆ ಹೊಳೇನರಸಿಪುರ ತಾ. ಗುಂಜೇವು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪಿಎಸ್ ಐ ಹಗರಣದಲ್ಲಿ ಬಂಧಿತನಾಗಿರುವ  ಮನುಕುಮಾರ್ ನ  ಅಣ್ಣ ವಾಸು ಆತ್ಮಹತ್ಯೆಗೆ ಶರಣಾಗಿದ್ದಾರೆ . 545 ಪಿಎಸ್ ಐ ನೇಮಕಾತಿಯ  ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಮನುಕುಮಾರ್ ಹೆಸರಿತ್ತು.  ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಮನುಕುಮಾರ್ 50ನೇ ರ್ಯಾಂಕ್ ಪಡೆದಿದ್ದ.

ಈ ನಡುವೆ ಮನುಕುಮಾರ್ ಅಣ್ಣ ವಾಸು ಡಿಗ್ರೂಪ್ ನೌಕರನಾಗಿದ್ದು, ಮನುಕುಮಾರ್  ಪಿಎಸ್ ಐ ಹಗರಣದ 8ನೇ ಆರೋಪಿಯಾಗಿದ್ದಾನೆ.  ಏಪ್ರಿಲ್ 30 ರಂದು ಮನುಕುಮಾರ್ ಬಂಧನವಾಗಿತ್ತು. ಇದರಿಂದ ಮನನೊಂದು ವಾಸು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಇನ್ನು  ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Key words: PSI –scam- Hassan- brother –surrenders-suicide