ಅಶ್ವಥ್ ನಾರಾಯಣ್ ರನ್ನ ರಾಜಕೀಯ ಬಲುಪಶು ಮಾಡಲು ಷಡ್ಯಂತ್ರ- ಸಚಿವ ಗೋಪಾಲಯ್ಯ ವಾಗ್ದಾಳಿ.

ಹಾಸನ,ಮೇ,6,2022(www.justkannada.in): ಪಿಎಸ್ ಐ ನೇಮಕಾತಿ ಅಕ್ರಮದಲ್ಲಿ ಸಚಿವ ಅಶ್ವಥ್ ನಾರಾಯಣ್ ಭಾಗಿಯಾಗಿಲ್ಲ. ಅಶ್ವಥ್ ನಾರಾಯಣ್ ರಾಜಕೀಯ  ಬಲುಪಶು ಮಾಡಲು ಷಡ್ಯಂತ್ರ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಸಚಿವ ಗೋಪಾಲಯ್ಯ ಕಿಡಿಕಾರಿದರು.

ಹಾಸನದ ಬೆಳವಾಡಿ ಗ್ರಾಮದಲ್ಲಿ ಮಾತನಾಡಿದ ಸಚಿವ ಗೋಪಾಲಯ್ಯ,  ಅಶ್ವಥ್ ನಾರಾಯಣ್ ರನ್ನ ತೇಜೋವಧೆ ಮಾಡಲಾಗುತ್ತಿದೆ. ರಾಜಕೀಯ ಬಲುಪಶೂ ಮಾಡಲು ಷಡ್ಯಂತ್ರ ರೂಪಿಸಲಾಗುತ್ತಿದೆ. ಆರೋಪ ಮಾಡುವ ಕಾಂಗ್ರೆಸ್ ನವರು ಅಶ್ವಥ್ ನಾರಾಯಣ್  ವಿರುದ್ದ ಸಾಕ್ಷಿ ಇದ್ದರೇ ತಂದು ಕೊಡಲಿ  ಈಗಾಗಲೇ ಪ್ರಕರಣ ಕುರಿತು ಸಿಐಡಿ ತನಿಖೆ ನಡೆಯುತ್ತಿದೆ. ಅಕ್ರಮದಲ್ಲಿ ಯಾರಿದ್ದಾರೆ ಅಂತ ಹೊರಬರಲಿದೆ ಎಂದರು.

ಈ ಹಿಂದಿನ ಸರ್ಕಾದಲ್ಲೂ ಅಕ್ರಮ ನಡೆದಿವೆ. ಆ ಬಗ್ಗೆಯೂ ತನಿಖೆಯಾಗಬೇಕು.  ಅಗ ಎಲ್ಲವೂ ಗೊತ್ತಾಗುತ್ತದೆ ಎಂದು ಸಚಿವ ಗೋಪಾಲಯ್ಯ ಆರೋಪಿಸಿದರು.

ಸಿಎಂ ಬದಲಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಗೋಪಾಲಯ್ಯ, ಚುನಾವಣೆ ದೃಷ್ಠಿಯಿಂದ ಸಿಎಂ ಬದಲಾವಣೆ ಇಲ್ಲ. ಸಿಎಂ ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ ಎದುರಿಸುತ್ತೇವೆ ಎಂದರು.

Key words: psi-scam-case-Minister- Gopalaiah- Ashwath Narayan