ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಿರುವ ಚೀನಾ: ಏಷ್ಯನ್ ಗೇಮ್ಸ್- 2022 ಮುಂದೂಡಿಕೆ.

ನವದೆಹಲಿ, ಮೇ 6, 2022 (www.justkannada.in): ಚೀನಾದ ಹ್ಯಾಂಗ್‌ ಝೂನಲ್ಲಿ ಇದೇ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಬೇಕಾಗಿದ್ದ ಏಷ್ಯನ್ ಗೇಮ್ಸ್ ಅನ್ನು ಚೀನಾ ಸರ್ಕಾರ ಅನಿರ್ಧಿಷ್ಟ ದಿನಾಂಕದವರೆಗೆ ಮುಂದೂಡಿದೆ.

ಚೀನಾದ ಮಾಧ್ಯಮಗಳು ಶುಕ್ರವಾರದಂದು ಒಲಂಪಿಕ್ ಕೌನ್ಸಿಲ್ ಆಫ್ ಏಷ್ಯಾ ವತಿಯಿಂದ ನೀಡಿರುವ ಮಾಹಿತಿಯನ್ನು ವರದಿ ಮಾಡಿವೆ.

ಕ್ರೀಡಾಕೂಟವನ್ನು ಮುಂದೂಡಿರುವುದಕ್ಕೆ ಯಾವುದೇ ನಿರ್ಧಿಷ್ಟ ಕಾರಣಗಳನ್ನು ನೀಡದಿದ್ದರೂ, ಸಹ ಕೋವಿಡ್ ಪ್ರಕರಣಗಳು ತೀವ್ರ ಪ್ರಮಾಣದಲ್ಲಿ ಹೆಚ್ಚಾಗಿದ್ದು, ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಿರುವ ಚೀನಾ ಕೋವಿಡ್ ಕುರಿತ ಮಾಹಿತಿಯನ್ನು ಘೋಷಿಸಿದ ನಂತರ ಈ ಸುದ್ದಿ ವರದಿಯಾಗಿದೆ.

Key words: China-fighting -covid-19-epidemic-Asian Games- 2022-postponement