ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣ: ಆರೋಪಿ ಆರ್.ಡಿ ಪಾಟೀಲ್ ಎಸ್ಕೇಪ್.

Promotion

ಕಲ್ಬುರ್ಗಿ.ಜನವರಿ,20,2023(www.justkannada.in): ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂದಿಸಿದಂತೆ ಸಿಐಡಿ ದಾಳಿ ವೇಳೆ ಪ್ರಕರಣದ ಕಿಂಗ್ ಪಿನ್ ಆರ್.ಡಿ ಪಾಟೀಲ್  ಎಸ್ಕೇಪ್ ಆಗಿರುವ ಮಾಹಿತಿ ಲಭ್ಯವಾಗಿದೆ.

ಪ್ರಕರಣದ ಆರೋಪಿ ಆರ್ .ಡಿ ಪಾಟೀಲ್ ಗೆ ವಿಚಾರಣೆಗೆ ಹಾಜರಾಗುವಂತೆ  ನೋಟಿಸ್ ನೀಡಲಾಗಿತ್ತು. ಆದರೆ ವಿಚಾರಣೆಗೆ ಆರ್.ಡಿ ಪಾಟೀಲ್ ಗೈರರಾಗಿದ್ದರು.  ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದ ರುದ್ರಗೌಡ ಪಾಟೀಲ್ ಕೆಲದಿನಗಳಿಂದ ನಾಪತ್ತೆಯಾಗಿದ್ದರು.  ನಿನ್ನೆ ಇಡಿ ದಾಳಿ ಸಂದರ್ಭದಲ್ಲಿ ಆರ್ ಡಿ ಪಾಟೀಲ್  ಮನೆಯಲ್ಲಿ ಇದ್ದರು.

ಮಾಹಿತಿ ಮೇರೆಗೆ ಕಲ್ಬುರ್ಗಿ ಅಕ್ಕಮಹಾದೇವಿ ಕಾಲೂನಿಯಲ್ಲಿರುವ  ರುದ್ರಗೌಡ ಮನೆಗೆ ಸಿಐಡಿ ತಂಡ ಹೋಗಿತ್ತು. ಈ ವೇಳೆ ರುದ್ರಗೌಡ ಪಾಟೀಲ ಸಿಐಡಿ ಅಧಿಕಾರಿಯನ್ನ ತಳ್ಳಿ ಪರಾರಿಯಾಗಿದ್ದಾರೆಂದು ಮಾಹಿತಿ ಲಭ್ಯವಾಗಿದೆ.

ತುಮಕೂರು ಠಾಣೆಯಲ್ಲಿ ರುದ್ರಗೌಢ ವಿರುದ್ದ ಪ್ರಕರಣ ದಾಖಲು ಹಿನ್ನೆಲೆ ಈ ಪ್ರಕರಣ ಸಂಬಂಧ ರುದ್ರಗೌಡನನ್ನ ವಶಕ್ಕೆ ಪಡೆಯಲು ಸಿಐಡಿ ಪಿಎಸ್ ಐ ಆನಂದ್ ಬಂದಿದ್ದರು. ವಶಕ್ಕೆ ಪಡೆಯಲು ಬಂದ ಪಿಎಸ್ ಐ ಅನ್ನೇ ತಳ್ಳಿ ಪರಾರಿಯಾಗಿದ್ದಾರೆ.

Key words: PSI –Recruitment- Illegal- Case-Accused -RD Patil -escapes.