ಎಸ್ ಟಿ ಜನಾಂಗಕ್ಕೆ ಶೇ.7.5ರಷ್ಟು ಮೀಸಲಾತಿ ನೀಡಿ: ಮೈಸೂರು ಜಿಲ್ಲಾ ನಾಯಕ ಸಂಘ ಸಂಸ್ಥೆಗಳ ಒಕ್ಕೂಟದಿಂದ ಪ್ರತಿಭಟನೆ..

kannada t-shirts

ಮೈಸೂರು,ಜೂ,6,2019(www.justkannada.in): ಎಸ್ ಟಿ ಜನಾಂಗಕ್ಕೆ ಶೇ.7.5ರಷ್ಟು ಮೀಸಲಾತಿ ನೀಡುವಂತೆ ಒತ್ತಾಯಿಸಿ  ಮೈಸೂರು ಜಿಲ್ಲಾ ನಾಯಕ ಸಂಘ ಸಂಸ್ಥೆಗಳ ಒಕ್ಕೂಟ ಇಂದು ಪ್ರತಿಭಟನೆ ನಡೆಸಿತು.

ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗಕ್ಕೆ ಆಗಮಿಸಿದ ಜಿಲ್ಲಾ ನಾಯಕ ಸಂಘ ಸಂಸ್ಥೆಗಳ ಒಕ್ಕೂಟದ ಸದಸ್ಯರು ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ.7.5 ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಧರಣಿ ನಡೆಸಿದರು. ಕೇಂದ್ರ ಸರ್ಕಾರದ 2005 ರ ಅದೇಶದಂತೆ ಶೇ.7.5  ರಷ್ಟು ಮೀಸಲಾತಿಯನ್ನು ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ಪಡೆಯುತಿದ್ದೇವೆ. ಇತರೇ ರಾಜ್ಯಗಳಲ್ಲಿ ಈ ಮೀಸಲಾತಿ ನೀಡುತ್ತಿದೆ. ಆದರೆ ಕರ್ನಾಟಕದಲ್ಲಿ ಮಾತ್ರ 7.5 ಮೀಸಲಾತಿ ನೀಡುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.

ರಾಜಗ್ಯದಲ್ಲಿ ಶೈಕ್ಷಣಿಕವಾಗಿ ಹಾಗೂ ಔದ್ಯೋಗಿಕಾವಾಗಿ ಎಸ್ ಟಿ ಜನಾಂಗಕ್ಕೆ ಶೇ.7.5 ಮೀಸಲಾತಿ ನೀಡುತ್ತಿಲ್ಲ. ಸಂವಿಧಾನ ಪ್ರಕಾರ ಜಾತಿ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಪ್ರಮಾಣ ನೀಡಬೇಕು. 2006 ರ ಟ್ರೈಬಲ್ ವೆಲ್ ಫೇರ್ ಆ್ಯಕ್ಟ್ ಕರ್ನಾಟಕದಲ್ಲಿ ಸಮರ್ಪಕವಾಗಿ ಅನುಷ್ಠಾನವಾಗಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

Key words: Provide reservation of 7.5% to STs-  Protest from Mysore District nayaka  Association

#mysore #STCommunity #reservation #Protest

website developers in mysore