ಮೈಸೂರಿನಲ್ಲಿ ರೈತರಿಂದ ದಿಢೀರ್ ಪ್ರತಿಭಟನೆ….

Promotion

ಮೈಸೂರು,ಆ,23,2019(www.justkannada.in): ರಾಯಚೂರಿನಲ್ಲಿ ರೈತರ ಬಂಧನ ಖಂಡಿಸಿ ಮೈಸೂರಿನಲ್ಲಿ ರೈತರು ದಿಢೀರ್ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದರು.

ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ರೈತ ಮುಖಂಡ ಬಡಗಲಪುರ ನಾಗೇಂದ್ರ  ನೇತೃತ್ವದಲ್ಲಿ ಜಮಾಯಿಸಿದ ರೈತರು ರಾಯಚೂರಿನಲ್ಲಿ ರೈತರ ಬಂಧನ ಖಂಡಿಸಿ ಪ್ರತಿಭಟನೆ ನಡೆಸಿದರು.  ರಾಯಚೂರಿನ ಡಿ.ಸಿ. ಶರತ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ  ರೈತ ಸಂಘ ಪ್ರತಿಭಟನೆ ನಡೆಸಿದೆ.

ಪ್ರತಿಭಟನೆ ವೇಳೆ ಮಾತನಾಡಿದ ರೈತ ಮುಖಂಡ ಬಡಗಲಪುರ ನಾಗೇಂದ್ರ,  ರಾಯಚೂರಿನ ಡಿ.ಸಿ. ಶರತ್ ಅವರು ಇನ್ನೂ ಬ್ರಿಟಿಷ್ ಸರ್ಕಾರದ ಗುಂಗಿನಲ್ಲಿದ್ದಾರೆ. ಜನ ಸೇವಕರಾಗಿ ಸೇವೆ ಮಾಡುವ ಬದಲು ದೊರೆ ರೀತಿ ವರ್ತನೆ ತೋರುತ್ತಿದ್ದಾರೆ. ಈ ಧೋರಣೆಯನ್ನು ರೈತ ಸಂಘ ತೀರ್ವ ವಿರೋಧ ವ್ಯಕ್ತಪಡಿಸುತ್ತದೆ ಎಂದು ಕಿಡಿಕಾರಿದರು.

ಹಾಗೆಯೇ ರಾಯಚೂರು ಜಿಲ್ಲಾಧಿಕಾರಿಗಳ ವಿರುದ್ಧ ಮುಖ್ಯಮಂತ್ರಿಗಳ ಬಳಿ ದೂರು ನೀಡಲಾಗುತ್ತೆ.  ಜಿಲ್ಲಾಧಿಕಾರಿ ವಿರುದ್ದ ರಾಯಚೂರಿನಲ್ಲೇ ರೈತ ಸಂಘದ ವತಿಯಿಂದ ಬೃಹತ್ ಪ್ರತಿಭಟನೆ ಮಾಡಲಾಗುವುದು. ಅವರನ್ನ ಬೇರೆಡೆ ವರ್ಗಾವಣೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯ ಮಾಡಲಾಗುವುದು ಎಂದು ಬಡಗಲಾಪುರ ನಾಗೇಂದ್ರ ಕಿಡಿಕಾರಿದರು.

Key words: protests  farmers -Mysore