ಬದುಕಿದ್ದೇವೆ ಎಂದು ತೋರಿಸಿಕೊಳ್ಳಲು ರೈತ ಮುಖಂಡರಿಂದ ಪ್ರತಿಭಟನೆ- ಸಿಎಂ ಬಿಎಸ್ ವೈ ವಿವಾದಾತ್ಮಕ ಹೇಳಿಕೆ…

Promotion

ಬೆಂಗಳೂರು,ಜನವರಿ,26,2021(www.justkannada.in): ಗಣರಾಜ್ಯೋತ್ಸವದ ದಿನದಂದೇ ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ದೇಶದಾದ್ಯಂತ ರೈತರು ಟ್ರ್ಯಾಕ್ಟರ್ ಪೆರೇಡ್ ನಡೆಸುತ್ತಿದ್ದು, ಈ ವೇಳೆಯೇ ರೈತ ಮುಖಂಡರ ಬಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.jk

ರೈತ ಮುಖಂಡರ ಪ್ರತಿಭಟನೆ ಬಗ್ಗೆ ಮಾತನಾಡಿರುವ ಸಿಎಂ ಬಿಎಸ್ ಯಡಿಯೂರಪ್ಪ, ರೈತ ಮುಖಂಡರು ಇನ್ನೂ ಬದುಕಿದ್ದೇವೆ ಎಂಬುದನ್ನು ತೋರಿಸೋದಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.Protests – farmer leader- show- alive-CM BS Yeddyurappa- Controversial Statement.

ರೈತರ ಶಾಂತಿಯುತ ಪ್ರತಿಭಟನೆಗೆ ನಮ್ಮ ಅಭ್ಯಂತರವೇನು ಇಲ್ಲ. ಆದ್ರೇ ಹಲವು ರೈತರಿಗೆ ಪ್ರತಿಭಟನೆ ಯಾಕೆ ಮಾಡ್ತಾ ಇದ್ದೇವೆ ಎಂಬುದೇ ಗೊತ್ತಿಲ್ಲ. ಅವರ ಬೇಡಿಕೆ ಏನೆಂಬುದನ್ನೂ ಕೂಡ ಹೇಳಿಲ್ಲ ಎಂದಿದ್ದಾರೆ. ಹಾಗೆಯೇ ನನ್ನ ಮನೆಯ ಬಾಗಿಲು ಯಾವಾಗಲೂ ತೆರೆದಿರುತ್ತದೆ. ರೈತಮುಖಂಡರು ಬಂದು ಚರ್ಚಿಸಬಹುದು ಎಂದು ಸಿಎಂ ಬಿಎಸ್ ವೈ ತಿಳಿಸಿದ್ದಾರೆ.

 

Key words: Protests – farmer leader- show- alive-CM BS Yeddyurappa- Controversial Statement.