ರಾಜಮೌಳಿ- ರಾಮ್ ಚರಣ್ ತೇಜ-ಜ್ಯೂನಿಯರ್ ಎನ್’ಟಿಆರ್ ಕಾಂಬೋ ! ಆರ್’ಆರ್’ಆರ್ ರಿಲೀಸ್ ಡೇಟ್ ಫಿಕ್ಸ್

ಬೆಂಗಳೂರು, ಜನವರಿ 26, 2021 (www.justkannada.in):  ಎಸ್​​.ಎಸ್. ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ಬಿಡುಗಡೆ ದಿನಾಂಕ ನಿಗದಿಯಾಗಿದೆ.

ರಾಮ್​ಚರಣ್ ತೇಜ ಹಾಗೂ ಜ್ಯೂನಿಯರ್ ಎನ್​​ಟಿಆರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ‘ಆರ್​​ಆರ್​ಆರ್’​​​​ ಅಕ್ಟೋಬರ್ 13 ರಂದು ಬಿಡುಗಡೆಯಾಗಲಿದೆ.

ಚಿತ್ರತಂಡ ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾ ಬಿಡುಗಡೆ ದಿನಾಂಕವನ್ನು ಅನೌನ್ಸ್ ಮಾಡಿದೆ.

ಭಾರತೀಯ ಚಿತ್ರರಂಗದಲ್ಲಿ ಈ ಸಿನಿಮಾ ಒಂದು ಇತಿಹಾಸ ನಿರ್ಮಿಸಲು ಸಜ್ಜಾಗಿದೆ.

ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲುರಿ ಸೀತಾರಾಮ ರಾಜು ಹಾಗೂ ಕೋಮರಂ ಭೀಮ ಜೀವನಾಧಾರಿತ ಸಿನಿಮಾವೇ ‘ಆರ್​​ಆರ್​ಆರ್’.