ಕಸಾಯಿ ಖಾನೆ ಸ್ಥಾಪನೆಗೆ ವಿರೋಧಿಸಿ ಪ್ರತಿಭಟನೆ: ಅಧಿಕಾರಿಯನ್ನ ತರಾಟೆ ತೆಗೆದುಕೊಂಡ ಸಾರ್ವಜನಿಕರು….

Promotion

ಮೈಸೂರು,ಅ,15,2019(www.justkannada.in): ಕಸಾಯಿ ಖಾನೆ ಸ್ಥಾಪನೆಗೆ ವಿರೋಧ  ವಿರೋಧ ವ್ಯಕ್ತಪಡಿಸಿ  ಮೈಸೂರು ಮಹಾನಗರ ಪಾಲಿಕೆ ವಿರುದ್ದ ಸ್ಥಳೀಯರು ಪ್ರತಿಭಟನೆ ನಡೆಸಿದರು.

ಹಳೆ ಕೆಸರೆ ಗ್ರಾಮಸ್ಥರು  ಕೆಸರೆಯ ಮಹಾನಗರ ಪಾಲಿಕೆಯ ಒಣಕಸ ಹಸಿಕಸ ವಿಂಗಡಣೆ ಸ್ಥಳದಲ್ಲಿ ಪ್ರತಿಭಟನೆ ನಡೆಸಿ  ಈ ಸ್ಥಳದಲ್ಲಿ ಕಸಾಯಿ ಖಾನೆ ಸ್ಥಾಪನೆ ಮಾಡದಂತೆ ಆಗ್ರಹಿಸಿದರು. ಸ್ಥಳಕ್ಕೆ ಬಂದ ಪಾಲಿಕೆಯ ಜೋನಲ್ ಅಧಿಕಾರಿಯನ್ನ ತರಾಟೆಗೆ ತೆಗೆದುಕೊಂಡ ಸಾರ್ವಜನಿಕರು ಮಹಾನಗರ ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಿನ್ನೆ ಮೇಯರ್ ಹಾಗೂ ಉಪ ಮೇಯರ್ ಅವರು ಇಲ್ಲಿಗೆ ಬಂದು ಸ್ಥಳ ಪರಿಶೀಲನೆ ಮಾಡಿದ್ದಾರೆ. ಈಗಾಗಲೇ ಅನೇಕ ಬಾರಿ ಇದನ್ನ ನಾವು ವಿರೋಧ ಮಾಡಿದ್ದೇವೆ. ಆದರೂ ಪದೇ ಪದೇ ಇಲ್ಲಿ ಕಸಾಯಿ ಖಾನೆ ಪ್ರಾರಂಭಿಸಲು ನಿರ್ಧರಿಸಿದ್ದಾರೆ. ಯಾವುದೇ ಕಾರಣಕ್ಕೂ ಕಸಾಯಿ ಖಾನೆ ತೆರೆಯದಂತೆ ಪ್ರತಿಭಟನಾಕಾರರು ಆಗ್ರಹಿಸಿದರು.

Key words:  Protests –against­- mysore-city corporation- oppose-Slaughterhouse