ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ಜೈಲೇ ಗತಿ: ಮತ್ತೆ 10 ದಿನಗಳ ಕಾಲ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ…

ನವದೆಹಲಿ,ಅ,15,2019(www.justkannada.in): ಅಕ್ರಮ ಹಣ ವರ್ಗಾವಣೆ ಆರೋಪದಡಿ ಬಂಧಿತರಾಗಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್  ನ್ಯಾಯಾಂಗ ಬಂಧನ ಅವಧಿಯನ್ನ ಮತ್ತೆ 10 ದಿನಗಳ ಕಾಲ ವಿಸ್ತರಣೆ ಮಾಡಿ ನವದೆಹಲಿಯ ಇಡಿ ಕೋರ್ಟ್ ಆದೇಶಿಸಿದೆ.

ಇಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾದ ಹಿನ್ನೆಲೆ ಇಂದು ಜೈಲು ಪೊಲೀಸರು ಡಿಕೆಶಿ ಅವರನ್ನ ಇಡಿ ಕೋರ್ಟ್ ಗೆ ಹಾಜರುಪಡಿಸಿದ್ದರು. ಅಕ್ಟೋಬರ್ 25ರವರೆಗೆ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ ಮಾಡಿ ಕೋರ್ಟ್ ಆದೇಶಿಸಿದೆ. ಇದು ಸತತ ಮೂರನೇ ಬಾರಿಗೆ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ ಮಾಡಲಾಗಿದೆ.

ಕುರ್ಚಿಗೆ ಬೇಡಿಕೆ ಇಟ್ಟ ಡಿ.ಕೆ ಶಿವಕುಮಾರ್…

ನನಗೆ ಬೆನ್ನುನೋವಿದೆ. ಕೂರಲು ಕುರ್ಚಿ ಕೊಡಿಸಿ ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ನ್ಯಾಯಾಧೀಶರ ಮುಂದೆ ಮನವಿ ಮಾಡಿದರು. ನನಗೆ ಬೇರೆ ಯಾವುದೇ ರಿಯಾಯಿತಿ ಬೇಡ. ನಾನು ಬಂದಿಖಾನೆ ಸಚಿವನಾಗಿದ್ದವನು. ಬಂಧೀಖಾನೆ ವಿಚಾರ ನನಗೆ ಗೊತ್ತಿದೆ. ಹೀಗಾಗಿ ನನಗೆ ಕುರ್ಚಿ ಕೊಡಿಸಿ ಎಂದು  ಬೇಡಿಕೆ ಇಟ್ಟರು.

ಇಂದು ಮಧ್ಯಾಹ್ನ ನವದೆಹಲಿ ಹೈಕೋರ್ಟ್ ನಲ್ಲಿ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.

Key words: Former minister -DK Sivakumar –extends- judicial custody – 10 days