ನಂಜನಗೂಡು ತಹಶೀಲ್ದಾರ್‌ ವರ್ಗಾವಣೆ ಹಿಂಪಡೆಯುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ.

Promotion

ಮೈಸೂರು,ಅಕ್ಟೋಬರ್,4,2021(www.justkannada.in):  ನಂಜನಗೂಡು ತಹಶಿಲ್ದಾರ್ ಮೋಹನ್ ಕುಮಾರಿ ವರ್ಗಾವಣೆ ಖಂಡಿಸಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಹುಚ್ಚಗಣಿ ಮಹದೇವಮ್ಮ ದೇವಾಲಯ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ನಂಜನಗೂಡು ತಹಶೀಲ್ದಾರ್‌ ಮೋಹನ್ ಕುಮಾರಿ ಅವರನ್ನ ಸರ್ಕಾರ ವರ್ಗಾವಣೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ವರ್ಗಾವಣೆಯನ್ನ ಖಂಡಿಸಿ ನಂಜನಗೂಡಿನಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಾಲ್ಲಿ ಭಾಗಿಯಾದ ನೂರಾರು ಜನರು ಭಾಗಿಯಾಗಿದ್ದು ವರ್ಗಾವಣೆ ಆದೇಶವನ್ನು ಹಿಂಪಡೆಯಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.

Key words: Protest – organizations -demanding – withdrawal – Nanjangud- Tehsildar -transfer.