ಸಂಸದ ಪ್ರತಾಪ್ ಸಿಂಹ ವಿರುದ್ಧ ಆಕ್ರೋಶ: ಮಾಜಿ ಸಚಿವ ಸುರೇಶ್ ಕುಮಾರ್ ಗೆ ವಕೀಲರಿಂದ ತರಾಟೆ.

Promotion

ಮೈಸೂರು,ಜೂನ್,6,2022(www.justkannada.in):  ಸಿದ್ದರಾಮಯ್ಯ ತಾಲ್ಲೂಕಿನಲ್ಲಿ ವಕೀಲರಾಗಿದ್ದವರು ಅವರಿಗೇನು ಗೊತ್ತು ಆರ್ಥಿಕತೆ ವಿಚಾರ ಎಂದು ಹೇಳಿಕೆ ನೀಡಿದ್ಧ ಸಂಸದ ಪ್ರತಾಪ್ ಸಿಂಹ ವಿರುದ್ಧ ಹುಣಸೂರಿನಲ್ಲಿ ವಕೀಲರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಹುಣಸೂರು ವಕೀಲರ ಸಂಘದ ಬಳಿ ಸಂಸದ ಪ್ರತಾಪಸಿಂಹ ವಿರುದ್ದ ಘೋಷಣೆ ಕೂಗಿ ವಕೀಲರು ಪ್ರತಿಭಟನೆ ನಡೆಸಿದರು.ಇದೇ ವೇಳೆ ಮತಯಾಚನೆಗೆ ತೆರಳಿದ್ದ ಮಾಜಿ ಸಚಿವ ಸುರೇಶ್ ಕುಮಾರ್‌ ಗೆ ತರಾಟೆ ತೆಗೆದುಕೊಂಡ ವಕೀಲರು, ನಿಮ್ಮ ಸಂಸದರು ನಮ್ಮನ್ನು ದಡ್ಡರು ಅಂದಿದ್ದಾರೆ. ತಾಲ್ಲೂಕಿನಲ್ಲಿ ಬಿಎ ಎಲ್ ಎಲ್ ಬಿ ಮಾಡಿರುವರು ದಡ್ಡರು ಅಂದಿದ್ದಾರೆ  ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ಪ್ರತಿಭಟನಾನಿರತ ವಕೀಲರಿಗೆ ಸ್ಪಷ್ಟನೆ ನೀಡಲು ಮಾಜಿ ಸಚಿವ ಸುರೇಶ್ ಕುಮಾರ್ ಪರದಾಡಿದ ಘಟನೆ ನಡೆಯಿತು.

Key words: protest- Lawyer- against-MP Pratap simha