ಚಡ್ಡಿ ಸುಡುವ ಅಭಿಯಾನ: ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಕ್ರೋಶ.

ವಿಜಯಪುರ,ಜೂನ್,6,2022(www.justkannada.in): ದೇಶದಲ್ಲೇ ಕಾಂಗ್ರೆಸ್ ಚಡ್ಡಿ ಕಳಚಿದೆ. ಎಲ್ಲ ಕಡೆ ಜನ ಕಾಂಗ್ರೆಸ್ ಚಡ್ಡಿ ಕಸಿದುಕೊಂಡಿದ್ದಾರೆ. ಹಾಗಾಗಿ ಆರ್ ಎಸ್ ಎಸ್ ಜಡ್ಡಿ ಸುಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದರು.

ಈ ಕುರಿತು ಇಂದು ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಉತ್ತರಪ್ರದೇಶ, ಮಧ್ಯಪ್ರದೇಶ, ಆಸ್ಸಾಂ, ಛತ್ತೀಸಗಢ ರಾಜ್ಯಗಳಲ್ಲಿ ಜನರು ಕಾಂಗ್ರೆಸ್ ನಾಯಕರ ಚಡ್ಡಿ ಕಳಚಿ ಕಳುಹಿಸಿದ್ದು,  ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತದಾರರು ಸಿದ್ದರಾಮಯ್ಯನ ಚಡ್ಡಿ ಮಾತ್ರವಲ್ಲ ಪಂಚೆಯನ್ನೂ ಕಳಚಿ ಕಳುಹಿಸಿದ್ದಾರೆ. ಇದರಿಂದ ಸಿದ್ಧರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಬೇರೆಯವರ ಚಡ್ಡಿ ಸುಡಲು ಮುಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.amit-shahs-visit-cabinet-expansion-union-minister-prahlad-joshi

ಶಿಕ್ಷಣ ಸಚಿವರ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಎನ್ ಎಸ್ ಯುಐ ಕಾರ್ಯಕರ್ತರ ಬಂಧನ ವಿರೋಧಿಸಿ ಕಾಂಗ್ರೆಸ್ ರಾಜ್ಯಾದ್ಯಂತ ಆರ್.ಎಸ್ ಎಸ್ ಚಡ್ಡಿ ಸುಡುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದಾರೆ.

Key words: Union minister -Prahlad Joshi- outrage- against-Congress